ಮಂಗಳೂರು, ಜು. 12: ಬಯ್ಕಂಪಾಡಿಯಲ್ಲಿ ಕೌಶಾಲಾಭಿವೃದ್ಧಿ ತರಬೇತಿ ಕೇಂದ್ರ ಇದೆ. ಅದನ್ನು ಬಳಸಿಕೊಳ್ಳದೆ ಎಂಆರ್‌ಪಿಎಲ್‌ನಿಂದ ಹಿಡಿದು ನಾನಾ ಕಡೆ ಅನುಭವ ಇಲ್ಲ ಎಂದು ಬೇರೆ ರಾಜ್ಯದವರನ್ನು ಕೆಲಸಕ್ಕೆ ಸೇರಿದನ್ನು ಇಂಟಕ್ ಖಂಡಿಸುತ್ತದೆ ಎಂದು ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಇಂಟಕ್ ನಾಯಕ ರಾಕೇಶ್ ಮಲ್ಲಿ ಹೇಳಿದರು.

ಸರಿಯಾದ ಕೋವಿಡ್ ಅಂಕಿಅಂಶ ನೀಡಬೇಕು. ಸತ್ತವರಿಗೆ ಪರಿಹಾರ ಕೊಡಬೇಕು. ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿ ಕಾರ್ಡ್ ವಿತರಿಸಲಾಗುತ್ತದೆ. ಅವರಿಗೆ ಪರಿಹಾರ, ಕೆಲಸ ಒದಗಿಸಲು ತಡವಾಗಬಾರದು ಎಂದು ಮಲ್ಲಿ ಹೇಳಿದರು.

ಕಾರ್ಮಿಕರಿಗೆ ಕನಿಷ್ಠ ವೇತನ ನೀಡಿಕೆ ಮತ್ತು ಇತರ ಸವಲತ್ತು ಒದಗಿಸಲು ಸರಕಾರವನ್ನು ಒತ್ತಾಯಿಸುವುದಾಗಿಯೂ ಅವರು ಹೇಳಿದರು. ಮುಖ್ಯವಾಗಿ ಜಿಲ್ಲೆಯಲ್ಲಿ ಉದ್ಯಮಗಳು ಹೆಚ್ಚಾದ ಪ್ರಮಾಣದಲ್ಲಿ ಸ್ಥಳೀಯರಿಗೆ ಕೆಲಸ ಸಿಗದಿರುವುದು ಖಂಡನೀಯ. ಹೊಸ ಕೈಗಾರಿಕಾ ಗೊಂಚಲುಗಳನ್ನು ಆರಂಭಿಸಿದರೆ ಸಾಲದು, ಸರೋಜಿನಿ ಮಹಿಷಿ ವರದಿ ಜಾರಿ ಕಟ್ಟುನಿಟ್ಟಾಗಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮನೋಹರ ಶೆಟ್ಟಿ, ನವೀನ್ ಡಿಸೋಜಾ, ಹರೀಶ್ ಕಾವೂರು,  ಸುವರ್ಣ, ರಹೀಂ, ಕಳ್ಳಿಗೆ ತಾರಾನಾಥ ಶೆಟ್ಟಿ ಮೊದಲಾದವರು ಇದ್ದರು.