ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉತ್ತರ ಕನ್ನಡ ಜಿಲ್ಲೆಯ ಹಲವು ಸ್ಥಳಗಳಿಗೆ ಗುರುವಾರ ಭೇಟಿ ನೀಡಿ ಮಳೆ ಅನಾಹುತ ಪರಿಶೀಲನೆ ನಡೆಸಿದರು.

ಅರೆಬೈಲ್ ಘಾಟ್ ಮತ್ತು ಕಳಚೆ ಕ್ರಾಸ್ ಗುಡ್ಡಗಳಲ್ಲಿ ಆಗಿರುವ ಭೂಕುಸಿತ ಅನಾಹುತಗಳನ್ನು ಮನನ ಮಾಡಿಕೊಂಡರು.

ಬಡಗಣದಿಂದ ತೆಂಕಣದ ಭಟ್ಕಳದವರೆಗೆ ಕರಾವಳಿಯಲ್ಲಿ ಆದ ನೆರೆ ಹಾನಿಯನ್ನು ಪರಿಶೀಲಿಸಿದರು. ಅಧಿಕಾರಿಗಳ ಜೊತೆ ಮಾತನಾಡಿದರು. ಮಾಜೀ ಮಂತ್ರಿ ಶಿವರಾಮ ಹೆಬ್ಬಾರ್ ಮತ್ತು ಹಲವು ಸ್ಥಳೀಯ ಬಿಜೆಪಿ ನಾಯಕರು ಅವರನ್ನು ಬಹಳ ಕಡೆ ಹಿಂಬಾಲಿಸಿದರು.