ಉಡುಪಿ: ಪೋಲೀಸು ಆಯುಕ್ತರಾದ ಅಕ್ಷಯ ಹಾಕೇ ಮಚ್ಚೀಂದ್ರ ಅವರು ಪಾಂಗಾಳದಲ್ಲಿ ನಡೆದ 39ರ ಶರತ್ ಶೆಟ್ಟಿ ಕೊಲೆಗಾರರಾದ ನಾಲ್ವರನ್ನು ಬಂಧಿಸಲಾಗಿದೆ. ಸುಪಾರಿ ನೀಡಿದ್ದ ಮುಖ್ಯ ಆರೋಪಿ ಕಟಪಾಡಿ ಯೋಗೀಶ ಆಚಾರ್ಯನಿಗೆ ಪೋಲೀಸರು ಹುಡುಕುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಕುಳಾಯಿಯ 20ರ ದಿನೇಶ್ ಶೆಟ್ಟಿ, 21ರ ಲಿಖಿತ್ ಕುಲಾಲ್, ಸುರತ್ಕಲ್‌ನ 24ರ ಆಕಾಶ್ ಕರ್ಕೇರ, 40ರ ಪ್ರಸನ್ನ ಶೆಟ್ಟಿ ಬಂಧಿತರು. ದಿನೇಶ್ ಶೆಟ್ಟಿ, ಲಿಖಿತ್ ಕುಲಾಲ್‌ರನ್ನು ನಿನ್ನೆಯೇ ಕೋರ್ಟಿನಲ್ಲಿ ನಿಲ್ಲಿಸಿ ಒಂದು ವಾರ ಪೋಲೀಸು ವಶಕ್ಕೆ ಪಡೆಯಲಾಗಿದೆ ಎಂದೂ ಅವರು ಹೇಳಿದರು.
ಒಂದೂವರೆ ತಿಂಗಳಿನಿಂದ ಕೊಲೆಗಾರರು ಮೂರು ಬಾರಿ ಶರತ್ ಶೆಟ್ಟಿಯನ್ನು ಕೊಲ್ಲಲು ಯತ್ನಿಸಿ ನಾಲ್ಕನೆಯ ಬಾರಿ ಯಶಸ್ವಿಯಾಗಿದ್ದರು. ಶರತ್ ಶೆಟ್ಟಿಯ ರಿಯಲ್ ಎಸ್ಟೇಟ್ ಪಾಲುದಾರ ಕೊಲೆಗೆ ಸುಪಾರಿ ನೀಡಿದ್ದಾನೆ. ಪರಾರಿಯಾಗಿರುವ ಆತ, ನಾಗರಾಜ, ಕಲಿ ಯೋಗೀಶ್, ಸಹಕರಿಸಿದ್ದ ಮುಖೇಶ್‌ರಿಗೆ ಬಲೆ ಬೀಸಿ ಪೋಲೀಸರು ಹುಡುಕಾಟ ನಡೆಸಿದ್ದಾರೆ.