ಕೇರಳದ ಮೊದಲ ವಿಧಾನ ಸಭೆಯ ಸದಸ್ಯೆಯಾಗಿದ್ದ ಹಿರಿಯ ಕಮ್ಯೂನಿಸ್ಟ್ ನಾಯಕಿ 102ರ ಪ್ರಾಯದಲ್ಲಿ ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ನಿಧನರಾದರು.
ವಯೋಸಹಜ ಕಾಯಿಲೆಯಿಂದ ಕೆಲವು ದಿನಗಳಿಂದ ಅವರು ಆಸ್ಪತ್ರೆಯಲ್ಲಿದ್ದರು. ಇಂದು ಬೆಳಿಗ್ಗೆ 7 ಗಂಟೆಗೆ ಅವರು ವಿಧಿವಶರಾದರು.
ಜಗತ್ತಿನ ಮೊದಲ ಚುನಾಯಿತ ಕಮ್ಯೂನಿಸ್ಟ್ ಸರಕಾರ 1957ರಲ್ಲಿ ರಚನೆಯಾದಾಗ ಗೌರಿ ಅವರು ಕಂದಾಯ ಸಚಿವೆ. 1964ರಲ್ಲಿ ಕಮ್ಯೂನಿಸ್ಟ್ ವಿಭಜನೆ ಆದಾಗ ಅವರು ಅವರು ಸಿಪಿಎಂ ಜೊತೆ ಉಳಿದರು.
ಸಹ ಕಮ್ಯೂನಿಸ್ಟ್ ಹಾಗೂ ಶಾಸಕ ಟಿ. ವಿ. ಥಾಮಸ್‌ರನ್ನು ಗೌರಿ ಮದುವೆ ಆಗಿದ್ದರು. ಮಲಯಾಳಿಗರು ಅವರನ್ನು ಗೌರಿ ಅಮ್ಮ ಎಂದೇ ಕರೆಯುತ್ತಿದ್ದರು. ಮೇಲ್ಜಾತಿ ರಾಜಕೀಯ ಪ್ರಶ್ನಿಸಿದರೆಂದು ಅವರನ್ನು ಸಿಪಿಎಂ ಉಚ್ಚಾಟನೆ ಮಾಡಿತು. ಆಗ ಅವರು ಜನತಿಪತಿಯ ಸಂರಕ್ಷಣಾ ಸಮಿತಿ ರಚಿಸಿದ್ದರು. ಅದು ಮುಂದೆ ಕಾಂಗ್ರೆಸ್ ನೇತೃತ್ವದ ಕೂಟದಲ್ಲಿ ಇತ್ತು.