ಕೆಲವು ಕಟ್ಟಡಗಳು ಭೂಕಂಪ ನಡೆದ ಒಂದೆರಡು ದಿನಗಳ ಬಳಿಕ ಬಿದ್ದಿದ್ದು ಅವುಗಳ ಅಡಿಯಿಂದ ಬದುಕುಳಿದ ಜನರನ್ನು ರಕ್ಷಿಸುವ ಕೆಲಸ ಮುಂದುವರಿದಿದ್ದು, ಫೆಬ್ರವರಿ 17ರ ಶುಕ್ರವಾರ ನಾಲ್ವರ ರಕ್ಷಣೆ ಸಾಧ್ಯವಾಗಿದೆ.
ಹತಾಯ್ ಪ್ರಾಂತ್ಯದ ಅಂಟಾಕ್ಲಾ ನಗರದ ಬಹುಮಹಡಿ ಕಟ್ಟಡದ ಅವಶೇಷಗಳಿಂದ 17 ಶವಗಳನ್ನು 11ನೇ ದಿನ ಹೊರ ತೆಗೆಯಲಾಗಿದೆ. ಅಲ್ಲೇ ಒಂದು ಕೋಣೆಯಲ್ಲಿ ನಾಲ್ವರನ್ನು ರಕ್ಷಕರು ಜೀವಂತವಾಗಿ ಹೊರ ತಂದರು; ಕೂಡಲೆ ಅಂಟಕ್ಲಾ ಆಸ್ಪತ್ರೆಗೆ ಸಾಗಿಸಿದರು. 14ರ ಬಾಲಕ, 26ರ ಮೆಹ್ಮೆಟ್ ಆಲಿ, 33ರ ಮುಸ್ತಫಾ ಅವ್ಸಿ ಹಾಗೂ ನೆಸ್ಲಿ ಎಂಬ ಮಹಿಳೆ ರಕ್ಷಿಸಲ್ಪಟ್ಟವರಾಗಿದ್ದಾರೆ. ಒಟ್ಟು ಸಾವು ಟರ್ಕಿ ಸಿರಿಯಾ ಸೇರಿ 42,000 ಮುಟ್ಟಿದ್ದಾಗಿ ವರದಿಯಾಗಿದೆ.