ಮೂಡುಬಿದಿರೆ:  ಜೈನ ಕಾಶಿಯಲ್ಲಿ ವಿಜಯದಶಮಿ ದಿನ ಅ.13ರಂದು ಬೆಳಿಗ್ಗೆ 6.00 ಗಂಟೆಗೆ ಜೈನ ಪೇಟೆಯ ತೆನೆಕಟ್ಟೆಯಿಂದ ಎಲ್ಲಾ ಶ್ರಾವಕರು ತೆನೆ ಪಡೆದುಕೊಂಡು ಗುರು ಬಸದಿ ಅರ್ಚಕರು ಶ್ರೀ ಮಠಕ್ಕೆ ಮೆರವಣಿಗೆಯಲ್ಲಿ ಬಂದು ಪಂಚ ಕುಮಾರ ಪೂಜೆ ಭಗವಾನ್ ಪಾರ್ಶ್ವನಾಥ ಸ್ವಾಮಿ ಪೂಜೆ ಪಟ್ಟದ ಕುಷ್ಮಾoಡಿನೀ ದೇವಿ ಪದ್ಮಾವತಿ ಬ್ರಹ್ಮಯಕ್ಷ, ಭೂಮಿ ದೇವಿ, ಧಾನ್ಯ ಲಕ್ಷ್ಮಿ,ನಾಗದೇವರ ಪೂಜೆ ಸಲ್ಲಿಸಿ ಗುರು ಬಸದಿಯಲ್ಲಿ ಭಗವಂತರ ಪೂಜೆ, ಗಣಧರ, ಕ್ಷೇತ್ರಪಾಲ ಪೂಜೆ ಶ್ರೀಗಳ ಚಂದನದ ಸಿಂಹಾಸನ ಪೂಜೆ, ಶ್ರೀ ಗಳ ಪಾದ ಪೂಜೆ ನೆರವೇರಿಸಿ ಪ್ರಸಾದ ನೀಡಿದರು.

ಶ್ರೀ ಮಠದಲ್ಲಿ ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ಸ್ವಾಮೀಜಿ ಪಾವನ ಸಾನ್ನಿಧ್ಯ ಮಾರ್ಗದರ್ಶನದಲ್ಲಿ 18 ಬಸದಿಗಳ ದೇವಕಾರ್ಯ ನೆರವೇರಿಸಿ ಅರ್ಚಕರಿಗೆ ದಾನ ದಕ್ಷಿಣೆ ನೀಡಿ ಶ್ರೀಮಠ, ವಿವಿಧ ಬಸದಿಗಳ ಜೀರ್ಣೋದ್ದಾರ ಸಂಕಲ್ಪ ಮಾಡಿ ಲೋಕದಲ್ಲಿ ಶಾಂತಿ ಸೌಹಾರ್ದತೆ ನೆಲೆಯಾಗಲಿ ಸರ್ವರಿಗೂ ಶುಭವಾಗಲಿ ಎಂದು ಹರಸಿ ಆಶೀರ್ವಾದ ಮಾಡಿದರು. ಪಟ್ಣ ಶೆಟ್ಟಿ ಸುದೇಶ್ ಕುಮಾರ್ ಬೆಟ್ ಕೇರಿ ಸುದೇಶ್, ಆದರ್ಶ್ ಕೊಂಡೆ ಮನೆತನ, ಸಂಜಯಂತ ಕುಮಾರ ಶೆಟ್ಟಿ 18ಬಸದಿ ಅರ್ಚಕರು ಉಪಸ್ಥಿತರಿದ್ದರು.