ಬದುಕೆಂದರೆ ಕನಸುಗಳ ಮಹಾಪೂರ ಕನಸುಗಳ ಮೂಟೆಯ ಹೊತ್ತು ಸಾಗುವ ಪಯಣ ಎಲ್ಲರೂ ತನ್ನವರೆಂದು ತಹತಹಿಕೆ ಒಂದಿಷ್ಟು ಸಂತೋಷ ಬೊಗಸೆಯಷ್ಟು ಪ್ರೀತಿಗೆ ಹಾತೊರೆಯುವ ಮನ.
ಬದುಕಿನಲ್ಲಿ ಅನೇಕ ಸಾರಿ ನಮ್ಮನ್ನ ನಾವು ಬದಲಾಯಿಸಿಕೊಳ್ಳುವ ಅನಿವಾರ್ಯತೆ ನಮ್ಮೆದುರು ಇದ್ದೆ ಇರುತ್ತದೆ. ಒಬ್ಬರಿಗೆ ಒಳ್ಳೆಯವರಾಗೊಕೆ ಹೋಗಿ ಇನ್ನೊಬ್ಬರಿಗೆ ಕೆಟ್ಟವರಾಗುತ್ತೆವೆ.
ನಾವು ನಮ್ಮಂತಿರಲು ಬಿಡದ ಇಕ್ಕಟ್ಟಿನ ಪರಿಸ್ಥಿತಿ. ಎಲ್ಲರ ಮೆಚ್ಚಿಸಲು ಹೋಗಿ ನಿನ್ನ ಸ್ವಇಚ್ಛೆ ಅದುಮಿಬಿಡಲಾಗುತ್ತದೆ. ಇತರರ ಇಷ್ಟ ಕಷ್ಟಗಳಿಗಾಗಿ ನಮ್ಮ ಕನಸುಗಳು ಕೈಜಾರುತ್ತವೆ ನಮ್ಮ ಬದುಕು ನಮ್ಮ ಜವಾಬ್ದಾರಿ ನಾವು ನಾವೇ ಆಗಿರೊದು ಕೂಡ ಒಂದು ದೊಡ್ಡ ಜವಾಬ್ದಾರಿ ಎನಿಸಿಕೊಂಡಿದೆ. ನಮ್ಮ ಬದುಕು ಬೇರೆಯವರ ಹಿಡಿತದಲ್ಲಿದ್ದರೆ ಅವರ ಇಚ್ಛೆಯಂತೆ ನಮ್ಮ ಬದುಕು ನಡೆಯುತ್ತದೆ ನಮಗೆ ಇಷ್ಟವಿಲ್ಲದ್ದನ್ನು ಮಾಡಬೇಕಾಗುತ್ತದೆ ಆಗ ನಮ್ಮ ಮನಸ್ಸಿನ ವಿರುದ್ಧ ನಾವು ನಡೆದುಕೊಳ್ಳುತ್ತೆವೆ ಆಗ ನಾವು ನಾವಾಗಿರುವುದಿಲ್ಲ. ನಮ್ಮಂತೆ ನಾವಿರದೆ ಇದ್ದಾಗ ನಮ್ಮ ಆಸೆ ಆಕಾಂಕ್ಷೆ ಕನಸು ನಮ್ಮ ಜವಾಬ್ದಾರಿಗಳಿಗೆ ಬೆಲೆ ಎಲ್ಲಿ..?
ಕಾಡಿನ ರಾಜ ಎನಿಸಿಕೊಂಡ ಸಿಂಹ ತನ್ನ ಮರಿಯನ್ನು ಗುಹೆಯಲ್ಲಿರಿಸಿ ಶತೃುವಿನ ಬಾಣಕ್ಕೆ ಬಲಿಯಾಗಿ ಪ್ರಾಣ ಬಿಡುತ್ತದೆ. ಬುದ್ಧ ತನ್ನ ಶಿಷ್ಯರೊಂದಿಗೆ ಕಾಡಿಗೆ ಬಂದ ನಡೆದ ವಿಷಯವೆಲ್ಲ ತನ್ನ ದಿವ್ಯ ದೃಷ್ಟಿಯಿಂದ ತಿಳಿದನು.ಸಿಂಹದ ಮರಿಯನ್ನು ಆಶ್ರಮಕ್ಕೆ ಕರೆದುಕೊಂಡು ಹೋದರು. ಸಿಂಹವನ್ನು ನೋಡಿ ಎಲ್ಲರೂ ಭಯಪಟ್ಟರು. ದಿನ ಕಳೆದಂತೆ ಸಿಂಹವನ್ನು ಕೂಡ ಎಲ್ಲ ಸಾಕುಪ್ರಾಣಿಗಳಂತೆ ಕಾಣತೊಡಗಿದರು ಹಾಗೂ ಸಿಂಹ ಕೂಡ ಜಿಂಕೆಗಳ ಜೊತೆ ಆಡುತಿತ್ತು. ಸಸ್ಯ ಆಹಾರವನ್ನೆ ತಿನ್ನುತ್ತಿತ್ತು. ಒಂದು ದಿನ ಬುದ್ಧ ಸಿಂಹವನ್ನು ಕರೆದು ಕಾಡಿಗೆ ಹಿಂತಿರುಗಲು ಹೇಳುತ್ತಾನೆ. ಸಿಂಹ ಆಶ್ರಮ ಬಿಟ್ಟು ಹೋಗಲಾರೆ ಎಂದು ದುಃಖಿಸುತ್ತದೆ. ಕಾಡಿಗೆ ರಾಜನ ಅವಶ್ಯಕತೆ ಇದೆ ನಿನ್ನ ಜವಾಬ್ದಾರಿ ನಿರ್ವಹಿಸು ಎಂದು ತಿಳಿಸಿ ಸಿಂಹವನ್ನು ಬಿಳ್ಕೊಡುತ್ತಾನೆ. ಕಾಡಿಗೆ ಹೋದ ಸಿಂಹವು ಸಸ್ಯಾಹಾರ ಸೇವಿಸುವುದು ಜಿಂಕೆಗಳ ಹಿಂದೆ ತಿರುಗುವುದನ್ನು ನೋಡಿ ಎಲ್ಲ ಪ್ರಾಣಿಗಳಿಗೂ ಆಶ್ಚರ್ಯವಾಗುತ್ತದೆ. ಜಿಂಕೆಯೊಂದಿಗೆ ಸ್ನೇಹವಾಗುತ್ತೆ ಒಮ್ಮೆ ನೀರಿನಲ್ಲಿ ತನ್ನ ಪ್ರತಿಬಿಂಬವನ್ನು ಕಂಡು ಭಯಪಡುತ್ತೆ ಯಾರದೂ ಕ್ರೂರ ಪ್ರಾಣಿ ಆಗ ಪ್ರತಿಬಿಂಬ ಹೇಳುತ್ತೆ ಇದು ನೀನೆ ನೀನೊಬ್ಬ ಕ್ರೂರಿ ನೀ ಇಷ್ಟ ಪ್ರೀತಿಸುತ್ತಿರುವ ಜಿಂಕೆಯನ್ನ ತಿಂದು ಬಿಡು ಎಂದು ಮನಸ್ಸು ಪದೆ ಪದೆ ಹೇಳುತ್ತದೆ ತನ್ನ ಮನಸ್ಸಿನ ಅಳಲನ್ನು ಬುದ್ಧನಿಗೆ ಹೇಳುತ್ತದೆ. ನಾನು ಮತ್ತೆ ಕಾಡಿಗೆ ಹೋಗಲಾರೆ ನಾ ಹೋದರೆ ನಾ ಪ್ರೀತಿಸುವ ಜಿಂಕೆಯನ್ನು ತಿಂದುಬಿಡುತ್ತನೆ ನಾನು ನನ್ನಿಂದ ದೂರ ಓಡಬೇಕಿದೆ ಆದರೆ ಎಲ್ಲಿ ಹೋಗಲಿ ಎಂದು ಹೇಳತ್ತದೆ. ಆಗ ಬುದ್ಧ ಹೇಳತ್ತಾನೆ ನೀನು ಕಾಡಿಗೆ ಹೋಗು.ಸಿಂಹ ಅದ್ಕೆ ಪ್ರತ್ಯುತ್ತರವಾಗಿ ಹೋದರೆ ಜಿಂಕೆಯನ್ನು ತಿಂದು ಬಿಡುತ್ತೆನೆ ಎನ್ನುತ್ತದೆ. ಆಗ ಬುದ್ದ ಹೇಳುತ್ತಾನೆ. ತಿಂದುಬಿಡು.ಆಗ ಸಿಂಹಕ್ಕೆ ಆಶ್ಚರ್ಯವಾಗುತ್ತದೆ. ಬುದ್ಧ ತನ್ನ ಮಾತನ್ನು ಮುಂದುವರೆಸುತ್ತಾನೆ
ನೀನು ನೀನಾಗಿರು ಕಾಡಿಗೆ ಹಿಂತಿರುಗು ಯಾವುದೂ ಅಹಿತಕರ ಘಟನೆ ನಡೆಯುವುದಿಲ್ಲ ನಿನ್ನ ಕರ್ತವ್ಯ ಪಾಲನೆ ಮಾಡು.ಸಿಂಹ ಕಾಡಿಗೆ ಹಿಂತಿರುಗಿದಾಗ ತಾನು ಪ್ರಿತಿಸುತ್ತಿದ್ದ ಜಿಂಕೆಯ ವಿಹಾಹ ಬೇರೊಂದು ಜಿಂಕೆಯ ಜೊತೆ ನಡೆದಿರುತ್ತದೆ. ಸಿಂಹವು ತನ್ನ ತನ ಕಳೆದುಕೊಂಡ ಬದುಕಲ್ಲ ನಮ್ಮ ವ್ಯಕ್ತಿತ್ವ ನಮ್ಮ ಜವಾಬ್ದಾರಿ ನಮ್ಮದೆ ಆಗಿರುತ್ತದೆ. ಪ್ರೀತಿದಿ ಜಿಂಕೆಯೂ ಕೂಡ ತನ್ನ ಬದುಕಿನಲ್ಲಿ ಪ್ರಕೃತಿಯ ಸಹಜತೆಯನ್ನು ಒಪ್ಪಿಕೊಂಡಿತು. ನಾನು ಕೂಡ ನನ್ನ ಕರ್ತವ್ಯ ಪಾಲನೆಯತ್ತ ಗಮನ ಹರಿಸುತ್ತೆನೆಂದು ಜೋರಾಗಿ ಘರ್ಜಿಸಿತು.ಈ ಹಿಂದೆ ಸಿಂಹ ಯಾವತ್ತೂ ಈ ರೀತಿ ಘರ್ಜಿಸಿರಲಿಲ್ಲ.. ಕಾಡಿನಲ್ಲಿ ರಾಜನ ಆಗಮನ ಧ್ವನಿ ಕಂಪನ ತರಿಸಿತು.
ಬದುಕಿನಲ್ಲಿ ನಮ್ಮ ವ್ಯಕ್ತಿತ್ವವನ್ನು ಅದುಮಿ ಬದುಕೊ ಅನಿವಾರ್ಯತೆಗಳು ಸಹಜ ಆದರೆ ಎಲ್ಲ ಅನಿವಾರ್ಯತೆಗಳನ್ನು ಮೀರಿ ನಮ್ಮೊಳಗಿನ ದನಿಯನ್ನು ಆಲಿಸಲು ಕಲಿಯಬೇಕು. ನಾವು ನಮ್ಮನ್ನ ನಮ್ಮ ದೃಷ್ಟಿ ಕೋನದಿಂದ ನೋಡದೆ ಸಮಾಜವೆಂಬ ಕನ್ನಡಕ ಧರಿಸಿ ನೋಡೊಕೆ ಶುರುಮಾಡಿದರೆ ಮುಗಿತು. ಜನರಿಗೆ ನಾವು ಹೇಗಿದ್ದರೂ ತೊಂದರೆನೆ ಕಾಗೆಯನ್ನು ಕೋಗಿಲೆಯಾಗುವುದಕ್ಕೆ ಪ್ರೇರೆಪಿಸುವ ಜನ ಕೋಗಿಲೆಯನ್ನ ಮತ್ತೆಂದೂ ಹಾಡದಂತೆ ನಿರಾಕರಿಸುತ್ತಾರೆ...ಯಾರು ಏನೆ ಹೇಳಿದರೂ "ಓ ಮನವೇ ನೀನು ನಿನ್ನಂತಿರು ಜಗವನ್ನು ಮೆಚ್ಚಿಸಲಾಗದು.ಬದುಕಬೇಕು ತನ್ನಿಚ್ಛೆಯಂತೆ ಅಂತರಾಳ ಒಪ್ಪುವಂತೆ."
Article by
ಅಂಜಲಿ ಶ್ರೀನಿವಾಸ