ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ:- ಸ್ಥಳೀಯ ತಾಲೂಕು ಕಛೇರಿ, ತಾಲೂಕು ಪಂಚಾಯತ್, ಮೂಡುಬಿದಿರೆ ಅಭಿವೃದ್ಧಿ ಪ್ರಾಧಿಕಾರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಗಳ ಸಂಯುಕ್ತ ಆಶ್ರಯದಲ್ಲಿ ಜನವರಿ 17ರಂದು ಸಮಾಜ ಮಂದಿರದಲ್ಲಿ ಹಕ್ಕು ಪತ್ರ ವಿತರಣೆ ನಡೆಯಿತು. ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಸಾಮಾನ್ಯ ಜನರ, ದೀನದಲಿತರ ಕಣ್ಣೀರು ಒರೆಸಲು, ಅವರಿಗೆ ನಾಳಿನ ಅನಿಶ್ಚಿತತೆ ತೊಲಗಿಸಿ ಶಾಶ್ವತ ನೆಮ್ಮದಿಯ ದಾಖಲೆ ಒದಗಿಸುವ ಕಾರ್ಯ ನಮ್ಮ ಸರಕಾರ ಮಾಡುತ್ತಿದೆ. ಬಡವರ ಪರವಾಗಿ ಬದ್ಧತೆಯಿಂದ ನಾವು ಕೆಲಸಮಾಡುತ್ತಿದ್ದೇವೆ. ಹಕ್ಕು ಪತ್ರ, ಗೃಹಲಕ್ಷ್ಮಿ, ಅನ್ನಭಾಗ್ಯ, ಕ್ಷೀರಭಾಗ್ಯ, ಯುವ ನಿಧಿ, ಶಕ್ತಿ, ಇತ್ಯಾದಿ ಎಲ್ಲಾ ಬಡವರ ಪರವಾಗಿ ಮಾಡಿರುವ ಯೋಜನೆಗಳು. ಇದರಲ್ಲಿ ಎಲ್ಲೂ ರಾಜಕೀಯ ಇಲ್ಲ ಎಂದು ಸಹರ್ಷದಿಂದ ಹಲವರಿಗೆ ಹಕ್ಕು ಪತ್ರ ವಿತರಣೆ ಮಾಡಿದರು. ಮೂಡುಬಿದಿರೆ ತಾಲೂಕಿನ ಎಲ್ಲ ಗ್ರಾಮಗಳ 334 ಮಂದಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್, ಮೂಡಾದ ಹರ್ಷವರ್ಧನ್ ಪಡಿವಾಳ್, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಕುಸುಮಾಧರ್, ಪುರಸಭಾ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು ಅವರುಗಳು ಹಾಜರಿದ್ದರು. ತಹಸೀಲ್ದಾರ್ ಪ್ರದೀಪ್ ಹುರ್ಡೇಕರ್ ಸ್ವಾಗತಿಸಿದರು.