ಮಂಗಳೂರು ಕೊಡಿಯಾಲ ಬೈಲಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ 73ನೇ ವರುಷಕ್ಕೆ ಕಾಲಿಟ್ಟ ಸಹಕಾರ ರತ್ನ ಎಂ. ಎನ್. ರಾಜೇಂದ್ರ ಕುಮಾರ್ ಅವರಿಗೆ ಅಭಿನಂದನಾ ಕಾರ್ಯಕ್ರಮವು ಫೆಬ್ರವರಿ 24ರಂದು ನಡೆಯಿತು. ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಣೆ ಮಾಡುವ ಕಾರ್ಯಕ್ರಮವೂ ಸಹ ನಡೆಯಿತು.
ಅಭಿನಂದನಾ ಸಮಿತಿ ಅಧ್ಯಕ್ಷರಾದ ಬೆಳಪು ದೇವಿಪ್ರಸಾದ್ ಶೆಟ್ಟಿಯವರು ಮೊದಲಿಗೆ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆ ಮಾಡಿ ಆಶಿರ್ವಚನ ನೀಡಿದ ಪುತ್ತಿಗೆ ಸುಗಣೇಂದ್ರ ತೀರ್ಥ ಸ್ವಾಮೀಜಿಯವರಿಗೆ ಗೌರವ ಅರ್ಪಣೆ.
ಅಭಿನವ ಮೊಳಹಳ್ಳಿ ಎಂದು ಖ್ಯಾತರಾದ ಮತ್ತು ಸಹಕಾರ ಎಂದರೆ ಎಂ. ಎನ್. ರಾಜೇಂದ್ರ ಕುಮಾರ್ ಅವರದು ವರಂಗದ ಪ್ರಸಿದ್ಧ ಜೈನ ಮನೆತನ. ಆರಂಭದಲ್ಲಿ ಮರದ ವ್ಯಾಪಾರದಲ್ಲಿ ಸಹಾಯಕರಾಗಿ ಅನಂತರ ವ್ಯವಸಾಯ ಸಹಕಾರ ಕ್ಷೇತ್ರ ಪ್ರವೇಶಿದ ಮೇಲೆ ಸಹಕಾರ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿದರು. ಜಿಲ್ಲಾ ಸಹಕಾರಿ ಬ್ಯಾಂಕನ್ನು ನೂರಾರು ಶಾಖೆಯದಾಗಿ ಕರಾವಳಿಯ ಮೂಲೆ ಮೂಲೆಗೆ ಮುಟ್ಟಿಸಿದ್ದಾರೆ. ನವೋದಯ ಗುಂಪು ಮೂಲಕ ದೇಶದ ನಂಬರ್ ಒನ್ ಸಹಕಾರಿ ಎನಿಸಿದ ಇವರು ಡಾಕ್ಟರೇಟ್ ಸಹಿತ ಹತ್ತಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ದೇಶದ ಅತ್ಯುತ್ತಮ ಪೇಡ್ ಬ್ಯಾಕ್ ಮತ್ತು ಸಾಲ ವಸೂಲಿಯ 100% ಸಾಧನೆ. ಸಾವಿರಾರು ಫಲಾನುಭವಿಗಳಿಗೆ ಬದುಕನ್ನು ಮೀಸಲಿಟ್ಟ ವ್ಯಕ್ತಿ ರಾಜೇಂದ್ರ ಕುಮಾರ್ ಅವರು 73 ವರುಷಕ್ಕೆ ಕಾಲಿಟ್ಟರೂ ಯೌವನದ ಹುರುಪಿನವರು ಎಂದು ಎಲ್ಲರೂ ಹಾರೈಸಿದರು.
ಈ ಬಾರಿಯ ನಮ್ಮ ಪರ್ಯಾಯದಲ್ಲಿ ಸಹಕಾರ ರತ್ನೋತ್ಸವಕ್ಕೆ ರಾಜೇಂದ್ರ ಕುಮಾರ್ ಅವರನ್ನು ಆಹ್ವಾನಿಸಿದ ಸ್ವಾಮೀಜಿ ಶುಭ ಕೋರಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪಿ. ಎಸ್. ಯಡಪಡಿತ್ತಾಯ ಮತ್ತು ಮನೋಹರ ಪ್ರಸಾದ್ ಅಭಿನಂದನಾ ಭಾಷಣಗಳನ್ನು ಮಾಡಿದರು.
ವೇದಿಕೆಯಲ್ಲಿ ವಿಶ್ವ ಬಂಟರ ಸಂಘದ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಜಿ. ಶಂಕರ್, ಅದಾನಿ ಪೌಂಡೇಶನ್ನಿನ ಕಿಶೋರ್ ಆಳ್ವ, ಸಹಕಾರ ಕ್ಷೇತ್ರದ ಜಯಕರ ಶೆಟ್ಟಿ, ಪ್ರಸಾದ್ ಕೌಶಲ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.