ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಲೋಕ ಸೈಕಲ್ ದಿನದ ಪ್ರಯಕ್ತ ನೆಹರು ಯುವ ಕೇಂದ್ರ ಮತ್ತಿತರರ ನೆರವಿನಿಂದ ಮಂಗಳೂರು ಮತ್ತು ಉಡುಪಿಗಳಲ್ಲಿ ಶುಕ್ರವಾರ ಮುಂಜಾನೆ 6 ಗಂಟೆಗೆ ಸೈಕಲ್ ಜಾಥಾ ನಡೆಯಿತು.
ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಿಂದ ಉಳ್ಳಾಲದ ಅಬ್ಬಕ್ಕ ಸರ್ಕಲ್‌ವರೆಗೆ ನಡೆದ ಜಾಥಾವನ್ನು ಶಾಸಕ ವೇದವ್ಯಾಸ ಕಾಮತ್ ಬಾವುಟ ತೋರಿ ಬೀಳ್ಕೊಟ್ಟರು.
ಉಡುಪಿಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಸೈಕಲ್ ಜಾಥಾ ಉದ್ಘಾಟಿಸಿದರು.