ಪಾರಿವಾಳ ಪತ್ರಿಕೆಯ ಸಂಪಾದಕ ರವಿಕುಮಾರ್ ಅವರಿಗೆ ಮಾನಹಾನಿ ಪ್ರಕರಣ ಒಂದರಲ್ಲಿ ವಿಧಿಸಿದ್ದ 6 ತಿಂಗಳ ಶಿಕ್ಷೆ ಮತ್ತು ರೂ. 25,000 ದಂಡವನ್ನು ಹೈಕೋರ್ಟ್ ಏಕ ಸದಸ್ಯ ಪೀಠವು ಕಾಯಂ ಗೊಳಿಸಿದೆ.
2000ದಲ್ಲಿ ಐಎಎಸ್ ಅಧಿಕಾರಿಯಾಗಿದ್ದ, ಈಗ ನಿವೃತ್ತರಾಗಿರುವ ಬಿ. ಎ. ಹರೀಶ್‌ರು ಪಾರಿವಾಳ ಪತ್ರಿಕೆಯ ರವಿಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
2017ರ ಆಗಸ್ಟ್ 30ರಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಅವರಿಗೆ ಶಿಕ್ಷೆ ಮತ್ತು ದಂಡ ವಿಧಿಸಿತ್ತು. ಮೇಲ್ಮನವಿ ಮನ್ನಿಸಿ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯವು ಶಿಕ್ಷೆಯನ್ನು 9 ತಿಂಗಳಿಗೆ ಏರಿಸಿತ್ತು. ಈಗ ಹೈಕೋರ್ಟ್ ಹಿಂದಿನ ಶಿಕ್ಷೆಯನ್ನೇ ಕಾಯಂ ಮಾಡಿದೆ.