ಕೂಡಲೆ ಅಗ್ನಿಪಥ ತಾತ್ಕಾಲಿಕ ನೇಮಕ ಯೋಜನೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ರಾಜಸ್ತಾನ ಸರಕಾರವು ನಿರ್ಣಯ ತೆಗೆದುಕೊಂಡಿದೆ.

ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಮಾತನಾಡಿ ಸಾರ್ವಜನಿಕ ಹಿತಾಸಕ್ತಿ ಹೊಂದಿಲ್ಲದ, ಯುವಜನ ಮಾರಕ ಯೋಜನೆಯಾಗಿದೆ ಅಗ್ನಿಪಥ. ತಾತ್ಕಾಲಿಕ ನೇಮಕಾತಿ ಎಂಬುದು ನಿರುದ್ಯೋಗ ನಿವಾರಣೆ ಅಲ್ಲ ಎಂದು ಹೇಳಿದರು.