ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಫಾ. ಮು. ಕಾಲೇಜ್ ಆಫ್ ಅಲೈಡ್ ಸಯನ್ಸಸ್, ಫಾ. ಮು. ನರ್ಸಿಂಗ್ ಕಾಲೇಜು, ಫಾ. ಮು. ಮಾತು ಮತ್ತು ಕೇಳುವಿಕೆ ಕಾಲೇಜು, ಫಾದರ್ ಮುಲ್ಲರ್ ಸ್ಕೂಲ್ ಆಫ್ ನರ್ಸಿಂಗ್ ಇವುಗಳ ಪದವಿ ಪ್ರದಾನ ಸಂಬಂಧವು ಏಪ್ರಿಲ್ 2ರಂದು ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಎಫ್.ಎಂ.ಸಿ.ಐ. ನಿರ್ದೇಶಕ ರೆವರೆಂಡ್ ಫಾದರ್ ರಿಚರ್ಡ್‌ ಅಲೋಯಿಸಸ್ ಕುವೆಲೊ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಂಗಳೂರು ಧರ್ಮ ಪ್ರಾಂತ್ಯದ ಬಿಶಪ್ ಅತಿ ವಂದನೀಯ ಡಾ. ಪೀಟರ್ ಪಾವುಲ್ ಸಲ್ದಾನಾ ಮುಖ್ಯ ಗಣ್ಯರಾಗಿ ಪದವಿ ಪ್ರಧಾನದಲ್ಲಿ ಭಾಗವಹಿಸುವರು.

ವಿಶಾಖಪಟ್ಟಣದ ಜಿಐಟಿಎಎಂ ವೈದ್ಯಕೀಯ ವಿಜ್ಞಾನಿಗಳ ವಿಶ್ವವಿದ್ಯಾನಿಲಯದ ಉಪಕುಲಪತಿ ಮತ್ತು ಭುಬನೇಶ್ವರ ಎಐಐಎಂಎಸ್‌ನ ಮಾಜೀ ನಿರ್ದೇಶಕರಾದ ಡಾ. ಗೀತಾಂಜಲಿ ಬತ್ಮನಬಾನೆ ಮುಖ್ಯ ಅತಿಥಿ ಆಗಿರುತ್ತಾರೆ. ಕರ್ನಾಟಕ ಉಚ್ಚ ನ್ಯಾಯಾಲಯದ ಮಾಜೀ ನ್ಯಾಯಾಧೀಶ ಜಾನ್ ಮೈಕೆಲ್ ಡಿಕುನಾ ಅವರು ಗೌರವ ಸ್ವೀಕರಿಸುವರು.

ನೀವು ನಮ್ಮ ಕರೆಯ ಮೇಲೆ ನಮ್ಮ ಪದವಿ ಪ್ರದಾನ ಸಮಾರಂಭದ ಸುದ್ದಿಗೆ ಸ್ಪಂದಿಸಿದ್ದೀರಿ ಸಂತೋಷ. ಸಾಂಕ್ರಾಮಿಕ ಕಾರಣದಿಂದ ಕಳೆದೆರಡು ವರುಷಗಳಿಂದ ನಮಗೆ ಈ ಸಮಾರಂಭವನ್ನು ಸರಿಯಾಗಿ ನಡೆಸಲು ಸಾಧ್ಯವಾಗಿಲ್ಲ.

ಒಟ್ಟು 615 ವಿದ್ಯಾರ್ಥಿಗಳು ಪದವಿಯನ್ನು ಈ ಸಂದರ್ಭದಲ್ಲಿ ಪಡೆಯುವರು. ಸಮಾರಂಭದಲ್ಲಿ ಹೊಸ ಪದವೀದರರ ಹೆತ್ತವರೂ ಸೇರಿ 3,500 ಜನರು ಈ ಪದವಿ ಪ್ರದಾನಕ್ಕೆ ಸಾಕ್ಷಿಯಾಗುವರು.

ಅಗಸ್ಟಸ್ ಮುಲ್ಲರ್‌ರಿಂದ ಸೇವಾ ಗುರಿಯೊಂದಿಗೆ 1880ರಲ್ಲಿ ಒಂದು ಆಲದ ಮರದಡಿ ಹುಟ್ಟಿದ ಫಾದರ್ ಮುಲ್ಲರ್ ಸಂಸ್ಥೆಯು ಈಗ ತಾನೇ ದೊಡ್ಡ ಆಲದ ಮರವಾಗಿ ಬೆಳೆದಿದೆ.