ಹಿಜಬ್ ಅತ್ಯಗತ್ಯದ ಧಾರ್ಮಿಕ ಆಚರಣೆ ಅಲ್ಲ. ಕುರಾನ್‌ನಲ್ಲಿ ಹಿಜಬ್ ಅತ್ಯವಶ್ಯಕ ಎಂದು ಹೇಳಿಲ್ಲ ಎಂದ ಕರ್ನಾಟಕ ಹೈಕೋರ್ಟ್ ಹಿಜಬ್ ಸಂಬಂಧಿತ ಎಲ್ಲ ಅರ್ಜಿಗಳನ್ನು ವಜಾ ಮಾಡಿತು.
ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ಜಸ್ಟಿಸ್ ಕೃಷ್ಣ ಎಸ್. ದೀಕ್ಷಿತ್, ಜಸ್ಟಿಸ್ ಜೈಬುನ್ನೀಸಾ ಮೊಹಿಯುದ್ದೀನ್ ಖಾಜಿ ಇದ್ದ ನ್ಯಾಯ ಪೀಠವು ಈ ತೀರ್ಪು ನೀಡಿತು.
ಉಡುಪಿ ಮುಸ್ಲಿಂ ವಿದ್ಯಾರ್ಥಿನಿಯರ ಸಹಿತ ಈ ಬಗೆಗಿನ ಎಲ್ಲ ಅರ್ಜಿಗಳನ್ನು ಹೈಕೋರ್ಟ್ ವಜಾ ಮಾಡಿತು.