ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ ಪಂಚಾಯತಿಯ ಗುರುವಾಯನಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತು ದಡದತ್ತ ತೇಲಿ ಬಂದಿದ್ದು ಜನ ಆತಂಕಗೊಂಡಿದ್ದಾರೆ.
ಬೆಳ್ತಂಗಡಿ ತಹಶಿಲ್ದಾರ್ ಮತ್ತು ಕುವೆಟ್ಟು ಪಂಚಾಯತಿಯವರು ಸ್ಥಳಕ್ಕೆ ಭೇಟಿ ನೀಡಿದರು. ನೀರನ್ನು ಪರೀಕ್ಷೆಗೆ ಕಳುಹಿಸಲಾಯಿತು. 13 ಎಕರೆ ವಿಸ್ತೀರ್ಣದ ಕೆರೆಯ ನೀರಿನ ಬಣ್ಣ ಬದಲಾಗಿದೆ. ನೀರಿಗೆ ವಿಷ ಸೇರಿದೆಯೆ, ಕಂಪೆನಿಗಳ ರಾಸಾಯನಿಕ ಸೇರಿ ದುಷ್ಪರಿಣಾಮ ಬೀರಿದೆಯೆ ಎಂಬ ಬಗೆಗೆ ವಿಶ್ಲೇಷಣೆ ನಡೆದಿದೆ.