ಬ್ರೆಜಿಲ್ ಚಂಡಮಾರುತದ ಭಾರೀ ಮಳೆಗೆ ಕೆಸರು ಪ್ರವಾಹ ಹರಿದುದರಿಂದ ಸತ್ತವರ ಸಂಖ್ಯೆಯು 186ಕ್ಕೇರಿದೆ; ಇವರಲ್ಲಿ 33 ಮಂದಿ ಮಕ್ಕಳು.
69 ಜನರು ನಾಪತ್ತೆಯಾಗಿದ್ದು, ಕೆಸರಿನಲ್ಲಿ ಅವರಿಗಾಗಿ ರಕ್ಷಣಾ ಕಾರ್ಯ ಮುಂದುವರಿದಿದೆ. ಹಲವು ಮನೆಗಳು ಹಾನಿಗೊಳಗಾಗಿವೆ. ಕೆಲವು ಮನೆಗಳು ಪೂರ್ಣ ನಾಶವಾಗಿರುವುದರಿಂದ 850 ಜನರನ್ನು ತಾತ್ಕಾಲಿಕ ಶಿಬಿರಗಳಲ್ಲಿ ಇರಿಸಲಾಗಿದೆ.