ವಶವಾಗಬೇಕು
ಅದೃಶವಾಗಬೇಕು
ನಿನ್ನಲೇ ಕಳೆದೋಗುತಾ
ಮೋಹಗೊಳ್ಳಬೇಕು
ನಿರ್ಮೋಹಿಯಾಗಬೇಕು
ನಿನ್ನಲೇ ಮರೆಯಾಗುತಾ
ಬಂಧಿಯಾಗಬೇಕು
ನಿರ್ಬಂಧಿಯಾಗಬೇಕು
ನಿನ್ನಲೇ ಸೆರೆಯಾಗುತಾ
ಸೊಂಪಾಗಬೇಕು
ನುಸುಕೆಂಪಾಗಬೇಕು
ನಿನ್ನಲೇ ತಂಪಪಡೆಯತಾ
ಓ ಪ್ರಕೃತಿ..,
ಅರ್ಥ ಪಡೆಯಬೇಕು
ನಿರರ್ಥವಾಗಬೇಕು
ನಿನ್ನಲೇ ತರ್ಕ ಪಡೆಯುತಾ
- (Pavithra) ಮಾಗಿದ ಮನಸ್ಸು