ಡೆಹ್ರಾಡೂನ್‌ನ ಪೆರೇಡ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪುಷ್ಕರ್ ಸಿಂಗ್ ದಾಮಿಯವರು ಎರಡನೆಯ ಅವಧಿಗೆ ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

ರಾಜ್ಯಪಾಲ ಗುರ್ಮಿತ್ ಸಿಂಗ್ ಪ್ರಮಾಣವಚನ ಬೋಧಿಸಿದರು. ಪ್ರಧಾನಿ ಮೋದಿಯವರು ಉಪಸ್ಥಿತರಿದ್ದರು. 

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 70ರಲ್ಲಿ 47 ಸ್ಥಾನ ಗೆದ್ದ ಬಿಜೆಪಿ ಅಧಿಕಾರ ವಹಿಸಿಕೊಂಡರೂ ದಾಮಿಯವರು ಸೋತಿದ್ದರು. ಈಗ ಆರು ತಿಂಗಳೊಳಗೆ ಅವರು ಶಾಸಕರಾಗಬೇಕಾಗಿದೆ.