ಬೆಂಗಳೂರು, ಮುಂಬಯಿ ಮೊದಲಾದ ದೊಡ್ಡ ನಗರಗಳಲ್ಲಿ ವಾರದ ಹಳೆಯ ಬಟ್ಟೆಗಳ ಮಾರುಕಟ್ಟೆ ವಿಶೇಷವಾದುದು. ಕಳೆದ ಏಳೆಂಟು ವರುಷಗಳಿಂದ ಮಂಗಳೂರಿನಲ್ಲೂ ಹಳೆಯ ಬಟ್ಟೆಗಳ ಬಣ್ಣ ಕಳೆಗಟ್ಟುತ್ತಿದೆ. 

ಮಂಗಳೂರು ಪುರಭವನ ಮತ್ತು ಮಾರುಕಟ್ಟೆಯ ನಡುವಣ ರಸ್ತೆಯಲ್ಲಿ ಭಾನುವಾರ ಹಳೆಯ ಬಟ್ಟೆಯ ಇವರ ಮಾರುಕಟ್ಟೆಗೆ ಉತ್ತಮ ಗಿರಾಕಿ ಇರುತ್ತವೆ. ಮುಖ್ಯವಾಗಿ ವಲಸೆ ಕಾರ್ಮಿಕರು ಇವರ ಗಿರಾಕಿಗಳು.

ಇತ್ತೀಚಿನ ದಿನಗಳಲ್ಲಿ ಶನಿವಾರ ಮಧ್ಯಾಹ್ನದ ಹೊತ್ತಿಗೇ ಇವರ ಅಂಗಡಿಗಳು ತೆರೆದುಕೊಂಡು ಆದಿತ್ಯವಾರ ಸಂಜೆಯವರೆಗೆ ವ್ಯವಹಾರ ನಡೆಸುತ್ತವೆ.

ಮಂಗಳೂರಿನ ಹಳೆ ಬಟ್ಟೆ ವ್ಯಾಪಾರದಲ್ಲಿ ಹುಣಸೂರು ಕಡೆಯ ಮರಾಠಿ ನಾಯ್ಕ ಜನರು ಹೆಚ್ಚು ತೊಡಗಿಕೊಂಡಿದ್ದಾರೆ. ನಾನಾ ರೀತಿಯಲ್ಲಿ ಸುತ್ತುವ ಜನರು ಬೇಡಿ ತರುವ, ಬಿಡಿಗಾಸು ಕೊಟ್ಟು ತರುವ ಬಟ್ಟೆ ಇಲ್ಲಿ ಮರುಬಿಕರಿಯಾಗುತ್ತವೆ.