ಹಿರಿಯಡ್ಕ ಪೋಲೀಸು ಠಾಣೆ ವ್ಯಾಪ್ತಿಯ ಆತ್ರಾಡಿಯಲ್ಲಿ ನಟ್ಟಿರುಳಿನಲ್ಲಿ 30ರ ತಾಯಿ ಚೆಲುವಿ ಮತ್ತು ಆಕೆಯ 10 ವರುಷದ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಸೋಮವಾರ ಬೆಳಕಿಗೆ ಬಂದಿದೆ.
ಚೆಲುವಿ ಮಣಿಪಾಲದಲ್ಲಿ ಸ್ವೀಪರ್ ಕೆಲಸ ಮಾಡುತ್ತಿದ್ದಳು. ಎರಡು ಬಾರಿ ಮದುವೆ ಆದರೂ ಗಂಡಂದಿರು ತ್ಯಜಿಸಿದ್ದಾರೆ. ಇಬ್ಬರು ಮಕ್ಕಳು. ತಮಿಳುನಾಡು ಮೂಲದ ಇವರ ಕುಟುಂಬ ಕಾಲು ಶತಮಾನದಿಂದ ಉಡುಪಿ ಬಳಿ ವಾಸಿಸುತ್ತಿದೆ. ಭಾನುವಾರ ಚೆಲುವಿಯ ತಾಯಿ ಮತ್ತು ಮಗ ಶಿವಮೊಗ್ಗದ ಸಂಬಂಧಿಕರ ಮನೆಗೆ ಹೋದ ರಾತ್ರಿ ಈ ಘೋರ ಕೊಲೆ ನಡೆದಿದೆ. ಪತ್ತೆಗೆ ಪೋಲೀಸು ತಂಡ ರಚಿಸಲಾಗಿದೆ.