ಪ್ರಧಾನಿ ಮೋದಿಯವರ ಭದ್ರತೆಯ ಕಜ್ಜಕ್ಕೆ ನಿಯೋಜಿತರಾಗಿದ್ದ ಸೈಬರ್ ಅಪರಾಧ ಠಾಣೆಯ ಪಿಎಸ್‌ಐ ಸುದರ್ಶನ್ ಅವರು ಯಶವಂತಪುರದ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ತಾಕೊಲೆ ಮಾಡಿಕೊಂಡಿದ್ದಾರೆ.

ಬೆಂಗಳೂರು ಹನುಮಂತನಗರ ಠಾಣೆಯಲ್ಲಿದ್ದ ಅವರನ್ನು ಇತ್ತೀಚೆಗೆ ಸೈಬರ್ ಅಪರಾಧ ಠಾಣೆಗೆ ನಿಯೋಜಿಸಲಾಗಿತ್ತು. ಪ್ರಧಾನಿ ಭದ್ರತೆಯ ಪೂರ್ವಭಾವಿ ಅಭ್ಯಾಸಕ್ಕೆ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಅವರು ಬಂದಿರಲಿಲ್ಲ. ಅಪ್ಪಂದಿರ ದಿನದಂದು ಮಗನಿಂದ ಶುಭಾಶಯ ಪಡೆದು, ಕೋಣೆ ಸೇರಿ ಆತ್ಮಹತ್ಯೆ ಮಾಡಿಕೊಂಡರು. ಯಶವಂತಪುರ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.