ಮಂಗಳೂರು :- ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಶಾಲೆ ಮತ್ತು ಶಕ್ತಿ ಪಪೂ ಕಾಲೇಜಿನ ಮುಂಜಾನೆಯ ಪ್ರಾಥನೆಯನ್ನು ದೀಪ ಬೆಳಗಿಸುವುದರ ಮೂಲಕ ವಿದ್ಯಾಭಾರತೀಯ ಕ್ಷೇತ್ರೀಯ ಸಹ ಸಂಘಟನಾ ಕಾರ್ಯದರ್ಶಿ ಜಿ. ಆರ್. ಜಗದೀಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪ್ರಾಥನೆಯ ಅರ್ಥವನ್ನು ವಿದ್ಯಾರ್ಥಿಗಳಿಗೆ ವಿವರಿಸದರು. ಪ್ರಾಥನೆಯನ್ನು ಏಕೆ ಸಾಮೂಹಿಕವಾಗಿ ಮಾಡುವುದು ಎನ್ನುವ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ನಾವು ಬದಲಾಗಬೇಕು ಇದರ ಮೂಲಕ ಸಮಾಜದ ಬದಲಾವಣೆಯು ಆಗಬೇಕು. ಭಾರತದ ಉನ್ನತಿಗೋಸ್ಕರ ನಾವು ಸಂಸ್ಕಾರಯುತ ಪ್ರಜೆಗಳಾಗಬೇಕೆಂದು ಹೇಳಿದರು. ನಾವು ಮಾಡುವ 10 ನಿಮಿಷದ ಪ್ರಾರ್ಥನೆ ನಮ್ಮ ಮನಸ್ಸಿನಲ್ಲಿ ದೊಡ್ಡ ಪರಿಣಾಮಗಳನ್ನು ಬೀರುತ್ತದೆ. ಇದರಿಂದ ಕಲಿಕೆಗೆ ಹಾಗೂ ಗ್ರಹಿಕೆಗೆ ಇದು ಉಪಯೋಗವಾಗುತ್ತದೆ. ನಮ್ಮಲ್ಲಿ ನಾವೆ ಶಿಸ್ತನ್ನು ಅಳಡಿಸಲು ಇದು ಸಹಕಾರಿಯಾಗುತ್ತದೆ ಎಂದು ಹೇಳಿದರು.
ನಂತರ ವಿಧ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು. ವಿಧ್ಯಾರ್ಥಿಗಳು ಈ ಹಂತದಲ್ಲಿ ನಡೆಯಬೇಕಾದ ದಾರಿಯನ್ನು ವಿವರಿಸಿದರು. ನಮ್ಮ ಪಂಚೇಂದ್ರಿಯಗಳ ಕುರಿತಂತೆ ವಿವರಣೆ ನೀಡಿದರು. ಈ ವಯಸ್ಸಿನಲ್ಲಿ ನಾವು ತೆಗೆದುಕೊಳ್ಳಬೇಕಾದ ನಿರ್ಣಯಗಳು ಸೂಕ್ತವಾಗಿರಬೇಕು. ಇದರಲ್ಲಿ ತಪ್ಪಿದ್ದರೆ ನಾವು ಜೀವನದಲ್ಲಿತಪ್ಪು ಹಾದಿಯನ್ನು ಹಿಡಿದು ಸಮಾಜಕ್ಕೆ ತೊಂದರೆಯಾಗುವ ಸನ್ನಿವೇಶವನ್ನು ನಿರ್ಮಾಣ ಮಾಡುವ ಸಾಧ್ಯವಿದೆ ಎಂದು ಹೇಳಿದರು. ನಾವು ಸರಿದಾರಿಯಲ್ಲಿ ನಡೆದು ಸಂಸ್ಕಾರಯುತ ಜ್ಞಾನಿಗಳಾಗುವುದು ನಮ್ಮ ಕೈಯಲ್ಲಿದೆ. ಆದ್ದರಿಂದ ನಮಗೆ ನಾವೆ ಬದಲಾಗಬೇಕು. ನಮ್ಮನ್ನು ಬೇರೆಯವರು ಬದಲು ಮಾಡುವುದು ಕಷ್ಟ. ನಿಮ್ಮ ಮೇಲೆ ಪೋಷಕರು ಇಟ್ಟ ನಂಬಿಕೆಯನ್ನು ಉಳಿಸಲು ನಿಮ್ಮಗುಣ ನಡತೆ ಸರಿಯಾದ ದಾರಿಯಲ್ಲಿ ಸಾಗಿದಾಗ ಇದು ಸಾದ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಈ ಸಂಧರ್ಭದಲ್ಲಿ ಆಡಳಿತಾಧಿಕಾರಿ ಡಾ.ಕೆ.ಸಿ ನಾೈಕ್, ಟ್ರಸ್ಟಿಗಳಾದ ಸಗುಣ. ಸಿ ನಾೈಕ್, ಅಂಜು ಆಳ್ವ ನಾೈಕ್, ಡಾ.ಮುರಳೀಧರ್ ನಾೈಕ್ ಕಾರ್ಯದರ್ಶಿ ಸಂಜಿತ್ ನಾೈಕ್, ಪ್ರಧಾನ ಸಲಹೆಗಾರ ರಮೇಶ.ಕೆ, ಅಭಿವೃದ್ದಿ ಅಧಿಕಾರಿ ಪ್ರಖ್ಯಾತ್‍ರೈ, ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಸುಧೀರ್‍ಎಮ್ ಕೆ, ಶಕ್ತಿ ರೆಸಿಡೆನ್ಸಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ.ಜಿ.ಕಾಮತ್, ದುರ್ಗೆಶ್ ಬೈಲೂರು ಉಪಸ್ಥಿತರಿದ್ದರು.