ಆರೆಸ್ಸೆಸ್‌ನ ಉನ್ನತ ಸ್ಥಾನಗಳಲ್ಲಿ ಒಂದೇ ಜಾತಿಯವರು ಏಕಿದ್ದಾರೆ? ಹಿಂದೂ ಒಂದು ಎಂದರೆ ಇದೇನಾ? ಉಳಿದ ಜಾತಿಯವರೆಲ್ಲ ಅಸ್ಪೃಶ್ಯರೆ? ದಯವಿಟ್ಟು ಉತ್ತರಿಸಿ ಎಂದು ಮಾಜೀ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯನವರು ಸರಣಿ ಟ್ವೀಟ್ ಮಾಡಿದ್ದಾರೆ.

ಸಂಘೇತರರ ನಿಂದನೆ, ದಾಳಿ, ಸುಳ್ಳು ಇವು ಸಂಘದ ಶಾಖೆಗಳಲ್ಲಿ ಕಲಿಸುವ ಘನಂದಾರಿ ವಿಷಯಗಳೆ? ಸಂಘದ ಕೇಂದ್ರಗಳಲ್ಲಿ ನಳಿನ್ ಕುಮಾರ್ ಕಟೀಲ್‌ರಿಗೆ ಕುರ್ಚಿ ಯಾವುದು? 40% ಕಮಿಶನ್ ಕಲಿಸಲು ಆರೆಸ್ಸೆಸ್ ಬೇಕೆ ಎಂದಿತ್ಯಾದಿಯಾಗಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.