ಮಂಗಳೂರು, ಜೂನ್ 2026: ಈ ಸೀಸನ್ನಲ್ಲಿ ಸಣ್ಣಪುಟ್ಟ ಸಂತೋಷದ ಕ್ಷಣಗಳನ್ನು ಸಂಭ್ರಮಿಸಲು ಫಿಜಾ ಬೈ ನೆಕ್ಸಸ್ ಮಾಲ್ ವಿಶಿಷ್ಟವಾದ ‘ಎಂಡ್ ಆಫ್ ಸ್ಯಾಡ್ನೆಸ್ ಸೇಲ್’ ಅನ್ನು ಪ್ರಾರಂಭಿಸಿದ್ದು, ಇದರ ಭಾಗವಾಗಲು ಮಂಗಳೂರಿನ ಜನತೆಯನ್ನು ಪ್ರೀತಿಯಿಂದ ಆಹ್ವಾನಿಸುತ್ತಿದೆ. ಇದು ಕೇವಲ ಒಂದು ಸಾಮಾನ್ಯ ಸೇಲ್ ಮಾತ್ರವಲ್ಲ ಜನರು ಮಾಲ್ಗಳಿಗೆ ಬರುವುದು ಕೇವಲ ಶಾಪಿಂಗ್ ಮಾಡಲು ಮಾತ್ರವಲ್ಲ ಎಂಬ ಸರಳ ಸತ್ಯದಿಂದ ಪ್ರೇರಿತಗೊಂಡು ಈ ಅಭಿಯಾನವನ್ನು ರೂಪಿಸಲಾಗಿದೆ. ಗ್ರಾಹಕರು ತಮ್ಮ ಜೀವನದ ಮೈಲಿಗಲ್ಲುಗಳನ್ನು ಸಂಭ್ರಮಿಸಲು, ಸ್ನೇಹಿತರನ್ನು ಭೇಟಿಯಾಗಲು, ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯಲು, ನೆನಪುಗಳನ್ನು ಸೃಷ್ಟಿಸಲು, ಹೊಸ ಅನುಭವಗಳನ್ನು ಪಡೆಯಲು ಮತ್ತು ಮುಖ್ಯವಾಗಿ ತಮ್ಮ ಬೇಸರವನ್ನು ಮರೆತು ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಲು ಮಾಲ್ಗೆ ಬರುತ್ತಾರೆ.
ಕೆಲಸದ ಸ್ಥಳದಲ್ಲಿ ಕಠಿಣ ದಿನ, ರದ್ದಾದ ಪ್ಲಾನ್ಗಳು, ನಿರಾಶಾದಾಯಕ ಫಲಿತಾಂಶ, ಕೈತಪ್ಪಿದ ಅವಕಾಶ ಅಥವಾ ಯಾವುದೇ ಕೆಲಸಗಳು ಅಂದುಕೊಂಡಂತೆ ನಡೆಯದ ದಿನಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಎದುರಿಸಿರುತ್ತೇವೆ. ಜೀವನದಲ್ಲಿ ಬೇಸರಗೊಳ್ಳಲು ನಮಗೆ ಹಲವು ಕಾರಣಗಳಿರಬಹುದು, ಆದರೆ ಫಿಜಾ ಬೈ ನೆಕ್ಸಸ್ ಮಾಲ್ನಲ್ಲಿ ಅದರಿಂದ ಹೊರಬಂದು ಮತ್ತೆ ಉಲ್ಲಾಸದಿಂದ ಪುಟಿದೇಳಲು ಅಸಂಖ್ಯಾತ ಮಾರ್ಗಗಳಿವೆ. ಸ್ನೇಹಿತರೊಂದಿಗೆ ಭರ್ಜರಿ ಊಟ ಸವಿಯುವುದು, ನೆಚ್ಚಿನ ಸಿನಿಮಾ ನೋಡುವುದು, ಕುಟುಂಬದೊಂದಿಗೆ ಅಮೂಲ್ಯ ಸಮಯ ಕಳೆಯುವುದು, ಹೊಸದನ್ನು ಅನ್ವೇಷಿಸುವುದು ಅಥವಾ ನಿಮಗಾಗಿ ನೀವೇ ವಿಶೇಷವಾದ ಉಡುಗೊರೆಯನ್ನು ಖರೀದಿಸುವ ಮೂಲಕ ಇಲ್ಲಿ ಸಂತೋಷವನ್ನು ಕಂಡುಕೊಳ್ಳಬಹುದು.



ಫ್ಯಾಷನ್, ಬ್ಯೂಟಿ, ಎಲೆಕ್ಟ್ರಾನಿಕ್ಸ್, ಡೈನಿಂಗ್, ಎಂಟರ್ಟೈನ್ಮೆಂಟ್ ಮತ್ತು ಲೈಫ್ಸ್ಟೈಲ್ ಬ್ರ್ಯಾಂಡ್ಗಳಲ್ಲಿ ರೋಮಾಂಚಕ ಆಫರ್ಗಳನ್ನು ಒಳಗೊಂಡಿರುವ ಈ ‘ಎಂಡ್ ಆಫ್ ಸ್ಯಾಡ್ನೆಸ್ ಸೇಲ್’, ಗ್ರಾಹಕರು ತಮ್ಮ ಜೀವನದ ಸಣ್ಣಪುಟ್ಟ ನಿರಾಶೆಗಳನ್ನು ಮರೆತು ಮುಖದಲ್ಲಿ ಮುಗುಳ್ನಗೆ ಮೂಡಿಸುವ ಸುಂದರ ಅನುಭವಗಳನ್ನು ಅಪ್ಪಿಕೊಳ್ಳಲು ಪ್ರೇರೇಪಿಸುತ್ತದೆ. 2026ರ ಜೂನ್ 16ರಿಂದ ಪ್ರಾರಂಭವಾಗುವ ಈ ಮೇಳದಲ್ಲಿ ಗ್ರಾಹಕರು ಪ್ರಮುಖ ಬ್ರ್ಯಾಂಡ್ಗಳಾದ ಲೈಫ್ಸ್ಟೈಲ್ ಹೆಚ್ ಅಂಡ್ ಎಮ್ ಮ್ಯಾಕ್ಸ್ ಮಾರ್ಕ್ಸ್ ಅಂಡ್ ಸ್ಪೆನ್ಸರ್ ಟ್ರೆಂಡ್ಸ್ ಸೋಚ್ ಲೀ ಕೂಪರ್, ಹೆಲ್ತ್ ಅಂಡ್ ಗ್ಲೋ ಕ್ಯಾಂಪಸ್ ಸೆಂಟ್ರೋ ಶೂಸ್ ಬಾಂಕರ್ಸ್ ಕ್ರಾಕ್ಸ್ ಸೇರಿದಂತೆ ಇನ್ನು ಹಲವಾರು ಪ್ರಸಿದ್ಧ ಬ್ರ್ಯಾಂಡ್ಗಳ ಮೇಲೆ ಶೇಕಡಾ 50 ರಷ್ಟು ವರೆಗಿನ ಭರ್ಜರಿ ರಿಯಾಯಿತಿ ಹಾಗೂ ಆಕರ್ಷಕ ಆಫರ್ಗಳನ್ನು ಪಡೆಯಬಹುದು.
ನೆಕ್ಸಸ್ ಸೆಲೆಕ್ಟ್ ಮಾಲ್ಸ್ ಸಂಸ್ಥೆಯು ‘ಅಸ್ಲಿ ಹ್ಯಾಪಿನೆಸ್’ ಎಂಬ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಈ ‘ಎಂಡ್ ಆಫ್ ಸ್ಯಾಡ್ನೆಸ್ ಸೇಲ್’ ವರ್ಷದ ಅತಿ ದೊಡ್ಡ ರಿಟೇಲ್ ಹಬ್ಬದ ಸಂದರ್ಭದಲ್ಲಿ ಗ್ರಾಹಕರು ನಮಗೆ ಭೇಟಿ ನೀಡಲು ಮತ್ತೊಂದು ಅದ್ಭುತ ಕಾರಣವನ್ನು ನೀಡುತ್ತದೆ. ಏಕೆಂದರೆ, ಕೆಲವು ಬಾರಿಯ ಸಂತೋಷ ಎನ್ನುವುದು ನಮ್ಮ ಇಡೀ ಜೀವನವನ್ನು ಬದಲಾಯಿಸುವುದರಲ್ಲಿ ಇರುವುದಿಲ್ಲ, ಬದಲಿಗೆ ಅದು ನಮ್ಮ ಇಂದಿನ ದಿನವನ್ನು ಹಸನ್ಮುಖಿಯಾಗಿಸುವುದರಲ್ಲಿ ಇರುತ್ತದೆ.
