ದ.ಕ .ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಘಟಕದ ವತಿಯಿಂದ ಮಹಾ ಸಮಾಜ ಸುಧಾರಕ ಪೂಜ್ಯನೀಯ ಕುದ್ಮುಲ್ ರಂಗರಾವ್ ರವರ 167 ನೇ ಜಯಂತಿ ಉತ್ಸವದ ಸಂದರ್ಭ ಅವರ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತಾಡಿದ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜರವರು ಮಾತನಾಡಿ ರಂಗರಾಯರ ಸಮಾಧಿ ಅಭಿವೃದ್ಧಿ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲು ಸಚಿವರಾದ ಯು.ಟಿ. ಖಾದರ್ ರವರ ಜೊತೆಗೆ ಮಾತನಾಡಿ ವಿಶೇಷ ಸಭೆಯನ್ನು ಆಯೋಜಿಸಲಾಗುವುದು.
ರಂಗರಾಯರು ನಮಗೆಲ್ಲರಿಗೂ ಆದರ್ಶ ಅವರ ಮಾನವೀಯ ಸಮಾಜವನ್ನು ಕಟ್ಟುವಲ್ಲಿ ನಾವೆಲ್ಲ ಮುಂದಾಗ ಬೇಕು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಪೂಜಾರಿ ಮಾತನಾಡಿ ಸಮಾನತೆಯ ಆಧಾರದಲ್ಲಿ ಸಮಾಜ ನಿರ್ಮಾಣದ ಕಾಯಕಕ್ಕೆ ರಂಗರಾಯರು ನಮಗೆಲ್ಲರಿಗೂ ಆದರ್ಶ ಎಂದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಪರಿಶಿಷ್ಟ ಘಟಕದ ಜಿಲ್ಲಾಧ್ಯಕ್ಷರಾದ ದಿನೇಶ್ ಮೂಳೂರು, ಬ್ಲಾಕ್ ಅಧ್ಯಕ್ಷರಾದ ಪ್ರಕಾಶ್ ಬಿ ಸಾಲ್ಯಾನ್, ಮುಖಂಡರುಗಳಾದ ರಘುರಾಜ್ ಕದ್ರಿ, ಹೊನ್ನಯ್ಯ, ಪ್ರೇಮ್ ನಾಥ್ ಬಳ್ಳಾಲ್ ಬಾಗ್, ಮಂಜುಳಾ ನಾಯಕ್, ಕಿರಣ್ ಕುಮಾರ್ ಕೊಡಿಯಾಲ್ ಬೈಲ್, ವಿಜಯಲಕ್ಷ್ಮಿ,ಸಮರ್ಥ್ ಭಟ್, ರಾಜೇಂದ್ರ ಚಿಲಿಂಬಿ, ರಘುವೀರ್ ಸೂಟರ್ ಪೇಟೆ, ರವಿರಾಜ್ ಪೂಜಾರಿ, ರವಿ ಸುಂಕದಕಟ್ಟೆ, ಪ್ರಕಾಶ್ ಕೋಡಿಕಲ್, ಭಾಸ್ಕರ್ ರಾವ್, ಅಭಿಷೇಕ್, ಹಿತೇಶ್ ಮೊದಲಾದವರು ಉಪಸ್ಥಿತರಿದ್ದರು.
