ವರದಿ ರಾಯಿ ರಾಜಕುಮಾರ್
ಮಳೆಗಾಲದಲ್ಲಿ ಉಭಯ ಜಿಲ್ಲೆಗಳ ಹಲವಾರು ಕಡೆಗಳಲ್ಲಿ ರಚನೆಯಾಗುತ್ತಿರುವ ರಾಷ್ಟ್ರೀಯ ರಸ್ತೆ ಪ್ರಾಧಿಕಾರದ ತಡೆಗೋಡೆಗಳು ಅಲ್ಲಲ್ಲಿ ಕೂಸಿದು ಬೀಳುತ್ತಿದ್ದು ಹೆಚ್ಚಿನ ಕಡೆಗಳಲ್ಲಿ ಮನೆ ಇತ್ಯಾದಿಗಳ ಮೇಲೆ ಜರಿದು ಬೀಳುತ್ತಿರುವುದರಿಂದಾಗಿ ಮತ್ತು ಕೆತ್ತಿಕಲ್ಲು, ಪುತ್ತಿಗೆ, ಎಡಪದವು, ವಾಮಂಜೂರು, ಇತ್ಯಾದಿ ಕೆಲವು ಪ್ರದೇಶಗಳಲ್ಲಿ ಈಗಾಗಲೇ ಕುಸಿದಿರುವುದು, ಕುಸಿಯಲು ಪ್ರಾರಂಭವಾಗಿರುವುದು, ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿ ನಿಂತಿರುವುದು, ಹಲವಾರು ಮನೆಗಳು ಈಗಾಗಲೇ ಕುಸಿಯುವ ಹಂತಕ್ಕೆ ಈಡಾಗಿರುವುದು ಕೂಡ ರಸ್ತೆಗುಂಟ ಕಂಡುಬರುತ್ತದೆ.






ರಾಷ್ಟ್ರೀಯ ರಸ್ತೆ ಪ್ರಾಧಿಕಾರ ಈ ಬಗ್ಗೆ ಬಹಳ ಮುಂಜಾಗ್ರತೆಯನ್ನು ವಹಿಸುವ ಅಗತ್ಯ ಇದೆ. ಗುರುಪುರ ಸೇತುವೆಯ ಮೇಲ್ಗಡೆ ಇತ್ತೀಚೆಗೆ ಮಾಡಿರುವಂತಹ ತಡೆಗೋಡೆಗಳು ಕೂಡ ಅಪಾಯಕಾರಿಯಾಗಿ ಕಂಡುಬರುತ್ತಿರುವುದು ಇದಕ್ಕೆ ನಿದರ್ಶನವಾಗಿದೆ. ಎಲ್ಲಾ ಕಡೆಯೂ ಕೂಡ ಮುಂಜಾಗರೂಕತೆ ವಹಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿರುತ್ತಾರೆ.
