ಮೂಡುಬಿದಿರೆ: ಮೇ 2026ರಲ್ಲಿ ನಡೆದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಾಣಿಜ್ಯ ವಿಭಾಗದ 39 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಗಮನಾರ್ಹ ಸಾಧನೆ ಮೆರೆದಿದ್ದಾರೆ.

ಪರೀಕ್ಷೆಗೆ ಹಾಜರಾದ ಜಶ್ ಕಾವೇರಿಯಪ್ಪ ಎ.ಎಂ. (297) ಪ್ರತೀಕ್ ಜೈನ್ ಹಾಗೂ ಸುಧೀಕ್ಷಾ ಎಸ್. ಶೆಟ್ಟಿ ತಲಾ 290 ಅಂಕ, ಪ್ರದ್ಯುಮ್ನ ಭೈರಡ್ಡಿ (289) ರಾಹುಲ್ (288), ಬಸವೇಶ್ವರ (287), ವೈಷ್ಣವಿ ರಾವ್ (286), ದಿಶಾ (279), ಮೋಹಿತ್ ಸಂದೇಶ್ ದೇಸಾಯಿ (276) ಶ್ರೇಯಾಂಕ್ ಆರ್. ಶೆಟ್ಟಿ (262) ಬೃಂದಾ ಆರ್.ಟಿ. (252), ಸ್ಪೂರ್ತಿ ವೀರೇಶ್ ಪಟ್ಟಣಶೆಟ್ಟಿ (251), ಗಾನಶ್ರೀ ಟಿ. (244), ಸಂಶ್ರಿತ್ (240), ಆದರ್ಶ್ ಬಾಲಚಂದ್ರ (239), ಎಸ್.ಜಿ. ಪ್ರತ್ಯೂμï (239), ಶಾರೇಲ್ ಲವಿಟಾ ರೋಡ್ರಿಗ್ಸ್ (236), ಮೊಹಮ್ಮದ್ ಫಹೀಮ್ (232), ವಿಕ್ಯಾತ್ (232), ಸಿಂಚನಾ ಶ್ಯಾಮಸುಂದರ್ ಡಂಬಳ (231), ನಿಹಾರಿಕಾ ಜೆ. ಶೆಟ್ಟಿ (231), ಟಿ. ಸೃಷ್ಟಿ (230), ಶ್ರಾವ್ಯ (230), ಮೋಹಿತ್ ಗೌಡ ಆರ್.ಎಸ್. (229), ಯಶಸ್ವಿನಿ ಎಚ್. (229), ಪೂರ್ಣ ಚಂದ್ರ (220), ಸಾನ್ವಿ ಸತೀಶ್ ಮಸೂರ್ (216), ರಿತಿಕಾ ಕುಲಾಲ್ (215), ಪೂರ್ಣಿಮಾ ಅಶೋಕ್ ಭಿಸ್ತೆ (215), ಸ್ವಪ್ನ (214), ಪರೀಕ್ಷಿತ್ ಕಾವ (214), ರತನ್ (212), ಎ.ಪಿ. ಶೋಭಿತಾ (206), ಸುಮೀತ್ ಗಡದ್ (206), ಅಮೃತಾ ಎಚ್.ಎಂ. (203), ಎನ್.ಆರ್. ಭುವನ್ಸಿಂಗ್ (202), ಕಾರ್ತಿಕ್ ಪೈ (202), ಎಂ. ನೇಹಾ (200) ಹಾಗೂ ಮಧುಶ್ರೀ ಎಸ್.ಆರ್. (200). ಅಂಕಗಳನ್ನು ಪಡೆದು ಸಾಧನೆ ಮೆರೆದಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಸಿಎ ಫೌಂಡೇಶನ್ನಿಂದ ಸಿಎ ಇಂಟರ್ಮೀಡಿಯೇಟ್ ಹಾಗೂ ಸಿಎ ಫೈನಲ್ವರೆಗೆ ನಿರಂತರ ಮತ್ತು ಸಮಗ್ರ ತರಬೇತಿ ವ್ಯವಸ್ಥೆ ರೂಪಿಸಲಾಗಿದೆ. ದೇಶದ ವಿವಿಧ ಭಾಗಗಳ ಅನುಭವಿ ಹಾಗೂ ಪರಿಣತ ಚಾರ್ಟರ್ಡ್ ಅಕೌಂಟೆಂಟ್ಗಳು ಮತ್ತು ವಿಷಯ ತಜ್ಞರಿಂದ ಗುಣಮಟ್ಟದ ಬೋಧನೆ, ನಿಯಮಿತ ಮೌಲ್ಯಮಾಪನ, ವೈಯಕ್ತಿಕ ಮಾರ್ಗದರ್ಶನ ಹಾಗೂ ಪರಿಕಲ್ಪನಾ ಆಧಾರಿತ ಕಲಿಕೆಗೆ ಆದ್ಯತೆ ನೀಡಲಾಗುತ್ತಿದೆ. ಈ ಶೈಕ್ಷಣಿಕ ಮಾದರಿಯೇ ವಿದ್ಯಾರ್ಥಿಗಳ ನಿರಂತರ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ- ಡಾ. ಎಂ. ಮೋಹನ್ ಆಳ್ವ
ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ವಾಣಿಜ್ಯ ವಿಭಾಗದ ಡೀನ್ ಅಭಿನಂದಿಸಿದ್ದಾರೆ.
