ಮಂಗಳೂರು ಜು 04: ದಕ್ಷಿಣಕನ್ನಡ ಜಿಲ್ಲೆಯ ದೇರಳಕಟ್ಟೆಯ ಫಾದರ್ ಮುಲ್ಲರ್ಸ್ ಕ್ಯಾಂಪಸ್ ನಲ್ಲಿ ಹೊಸದಾಗಿ ಆರಂಭಗೊಂಡಿರುವ ‘ಪೃಥ್ವಿಓಷನ್ ಬ್ಲೂ’ ಫ್ಯಾಮಿಲಿ ರೆಸ್ಟೋರೆಂಟ್ ಉದ್ಘಾಟನಾ ಕಾರ್ಯಕ್ರಮವನ್ನು ದಕ್ಷಿಣಕನ್ನಡ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.




ನಂತರ ಮಾತನಾಡಿದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರಿನ ಜನರು ಜಗತ್ತಿನ ಅನೇಕ ದೇಶಗಳಲ್ಲಿ ಹೊಟೇಲು ಉದ್ಯಮವನ್ನು ನಡೆಸಿ ಯಶಸ್ಸನ್ನು ಗಳಿಸಿದ್ದಾರೆ ಆದ್ದರಿಂದ ನಾನು ಉದ್ಘಾಟಣೆ ಮಾಡಿರುವ ಇಬ್ಬರು ಯುವಕರು ಮಾಡಿರುವ ಹೋಟೇಲು ಉದ್ಯಮವು ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು. ನಂತರ ಮುಖ್ಯ ಅತಿಥಿಯಾಗಿ ಆಗಮಿಸಿದ ಪುತ್ತೂರಿನ ಮಾಜಿ ಶಾಸಕಿ ಶಂಕುತಲಾ ಶೆಟ್ಟಿ ಮಾತನಾಡಿ ಯುವಕರು ದೈರ್ಯದಿಂದ ಪ್ರಾರಂಭ ಮಾಡಿದ ಉದ್ಯಮವು ಎಲ್ಲಾರಿಗೂ ಅನುಕೂಲವಾಗಲಿ ಎಂದು ಶುಭ ಹಾರೈಸಿದರು.
ಫಾದರ್ ಮುಲ್ಲರ್ ಸಂಸ್ಥೆಯ ಆಡಳಿತಾಧಿಕಾರಿ ರೆವರೆಂಡ್ ಫಾ. ಡೊನಾಲ್ಡ್ ನಿಲೇಶ್ ಕ್ರಾಸ್ತಾ ಮುಖ್ಯ ಅತಿಥಿಯಾಗಿ ಮಾತನಾಡಿ ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳ ಸರ್ವ ಸಹಕಾರವನ್ನು ಈ ಉದ್ಯಮಕ್ಕೆ ಕೊಡುವುದಾಗಿ ತಿಳಿಸಿದರು. ನಮ್ಮದೆ ಕಟ್ಟಡದಲ್ಲಿ ಪ್ರಾರಂಭವಾಗಿರುವ ಹೊಟೇಲಿನ ಪಾಲುದಾರರಿಗೆ ಶುಭವನ್ನು ಹಾರೈಸಿದರು. ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಮೆಡಿಕಲ್ ಕಾಲೇಜುಗಳು ಹೆಚ್ಚುವಿರುವ ಜಾಗದಲ್ಲಿ ಹೊಟೇಲ್ ಉದ್ಯಮ ಪ್ರಾರಂಭವಾಗಿರುವುದರಿಂದ ಎಲ್ಲರಿಗೆ ಅನುಕೂಲವಾಗಿದೆ. ಶುಚಿರುಚಿಯಾದ ಆಹಾರ ತಯಾರಿಯಿಂದ ಅನೇಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯ ಎಸ್. ಶೆಟ್ಟಿ ಶುಭವನ್ನು ಹಾರೈಸಿದರು. ಮಂಗಳೂರು ಮಂಡಲ ಬಿಜೆಪಿ ಅಧ್ಯಕ್ಷ ಜಗದೀಶ್ ಆಳ್ವ ಕುವೈತ್ತಬೈಲ್ ಅವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸೇವಾ ಭಾರತಿ ಕಾರ್ಯದರ್ಶಿ ನಾಗರಾಜ್ ಭಟ್ ,ಸೇವಾ ಭಾರತಿಕೋಶಾಧಿಕಾರಿ ವಿನೋದ್ ಶೆಣೈ , ಡಾ. ಸತೀಶ್ರಾವ್ ,ರಾಷ್ಟ್ರೀಯ ಸೇವಾ ಭಾರತಿಯ ಪ್ರಮುಖರು ಚೆನ್ನಯ್ಯ ಸ್ವಾಮಿ ,ಶಕ್ತಿ ಎಜ್ಯುಕೇಶನ್ ಟ್ರಸ್ಟ್ ನ ಮುಖ್ಯ ಸಲಹೆಗಾರ ರಮೇಶ್ ಕೆ ,ಮಾಲಕರಾದ ಪೃಥ್ವಿಪಾಲ, ಮಹೇಶ್ ವಿ. ಉಪಸ್ಥಿತರಿದ್ದರು .
