ಗುರು ಎಂದರೆ ಅಜ್ಞಾನವೆಂಬ ಕತ್ತಲನ್ನು ತೊಲಗಿಸಿ, ಜ್ಞಾನವೆಂಬ ಬೆಳಕನ್ನು ತೋರುವ ಮಾರ್ಗದರ್ಶಕ, ಶಿಕ್ಷಕ ಅಥವಾ ಆಧ್ಯಾತ್ಮಿಕ ಆಚಾರ್ಯ ಜೀವನದಲ್ಲಿ ಪ್ರತಿಯೊಂದು ಜೀವಿಯು ಗುರುವೇ ಆಗಿರುವನು.. ಸತತವಾಗಿ ಪ್ರಯತ್ನ ಮಾಡುವ ಇರುವೆ ಸದಾ ಒಳಿತು ಮಾರ್ಗ ತೋರುವವ ಸದಾ ತಪ್ಪುಗಳ ಹುಡುಕುವ ಶತ್ರುವು ಗುರುವೇ ಆಗಿರುವನು.

ತಪ್ಪನ್ನು ತಪ್ಪು ಎಂದು ಗುರುವು ಸರಿ ಮಾರ್ಗ ತೋರುವವನು.. ಒಂದು ರಾಜ್ಯದಲ್ಲಿ ರಾಣಿ ಧಾರ್ಮಿಕವಾಗಿದ್ದರು ಒಮ್ಮೆ ಪಂಡಿತ ರಾಣಿಯ ಆಸ್ಥಾನದಲ್ಲಿ ಕಥನ ಹೇಳುತ್ತಿರುತ್ತಾರೆ. ರಾಮ್ ನಾಮದಿಂದ ದೊರಕುವುದು ಮುಕ್ತಿ ಎಂದಾಗ ಪಂಜರದೊಳಗಿನ ಗಿಳಿ ಅರೇ ಪಂಡಿತ ನಿನ್ನೊಬ್ಬ ಸುಳ್ಳ ಎಂದಿತು. ಸಭೆಯಲ್ಲಿ ಎಲ್ಲರು ಆಶ್ಚರ್ಯರಾದರು ಪಂಡಿತನಿಗೆ ಮುಜುಗರವಾಯಿತು. ಮರು ದಿನ ಮತ್ತೆ ಪಂಡಿತ ಕಥನ ಮಾಡುವಾಗ ಗಿಳಿ ಮತ್ತೆ ಸುಮ್ನಿರು ಸುಳ್ಳ ಎಂದಿತು. ಇದರಿಂದ ಪಂಡಿತನಿಗೆ ಇತರರು ತನ್ನ ಬಗ್ಗೆ ಏನು ತಿಳಿಯುತ್ತಾರೋ ಎಂದು ಬೇಸರವಾಯಿತು ಗಿಳಿಯ ಮೇಲೆ ಕೋಪವು ಬಂದಿತು. ಪಂಡಿತನು ತನ್ನ ಗುರುವಿಗೆ ಸಭೆಯಲ್ಲಿ ನಡೆದ ಸಂಗತಿಯನ್ನು ಹೇಳಿದನು. ಅವರು ಋಷಿಮುನಿಯಾಗಿದ್ದರು ನಾಳೆ ನಾನು ಕೂಡ ನಿಮ್ಮ ಜೊತೆ ಬರುವೆ ಎಂದರು.. ಮರುದಿನ ಮತ್ತೆ ಪಂಡಿತರು ರಾಮನಾಮದಿಂದ ದೊರಕುವುದು ಮುಕ್ತಿ ಎಂದರು ಪಂಜರದೊಳಗಿನ ಗಿಳಿ ಸುಮ್ನಿರು ಸುಳ್ಳ ಎಂದಿತು ಪಂಡಿತನಿಗೆ ಕಸಿವಿಸಿವಾಯಿತು. ಆಗ ಋಷಿಮುನಿಗಳು ಏಕಾಂತದಲ್ಲಿ ಗಿಳಿಯನ್ನು ಕೇಳಿದರು ನೀನು ಏಕೆ ಪಂಡಿತರನ್ನು ಸುಳ್ಳ ಎನ್ನುತ್ತಿಯ ಎಂದು.. ಆಗ್ ಗಿಳಿ ಹೇಳಿತು ನಾನು ಆಗಸದಲ್ಲಿ ಸ್ವತಂತ್ರವಾಗಿ ಹಾರಡುತ ಇದ್ದೆ ಒಂದು ದಿನ ಆಶ್ರಮದ ಮರದ ಮೇಲೆ ಕೂತೆ ಅಲ್ಲಿ ರಾಮ್ ನಾಮ ಜಪಿಸುತ್ತಿದ್ದರು. ನಮ್ ರಾಮ ರಾಮ ಎನ್ನುತಿದ್ದೆ ಅದನ್ನು ಕೇಳಿ ಋಷಿಯು ನನ್ನ ಒಂದು ಪಂಜರದೊಳಗೆ ಇರಿಸಿ ಎರಡೂಲ್ಮುರು ಶ್ಲೋಕ ಹೇಳಿಕೊಟ್ಟರು. ನಾನು ಕೂಡ ಹೇಳಲಾರಾಂಭಿಸಿದೆ.. ಒಂದು ದಿನ ಒಬ್ಬ ವ್ಯಾಪಾರಿ ಆಶ್ರಮಕ್ಕೆ ಬಂದನು ಬಹಳಷ್ಟು ಫಲ ಧಾನ್ಯ ಕೊಟ್ಟರು ಋಷಿಗಳು ಸಂತುಷ್ಟರಾಗಿ ಪಂಜಾರದೊಳಗಿನ ನನ್ನನು ವ್ಯಾಪಾರಿಗೆ ನೀಡಿದರು. ಅವರು ಬೆಳ್ಳಿಯ ಪಂಜರದಲ್ಲಿ ನನ್ನ ಇರಿಸಿದನು. ದಿನಗಳು ಕಳೆದಂತೆ ಬಂಧನವು ಹೆಚ್ಚಾಯಿತು. ವ್ಯಾಪಾರಸ್ಥ ರಾಜನಿಂದ ತನ್ನ ಕೆಲಸದ ಲಾಭಕ್ಕಾಗಿ ನನ್ನನ್ನು ರಾಜನಿಗೆ ಉಪಹಾರವಾಗಿ ಕೊಟ್ಟನು ರಾಜನು ನನ್ನಿಂದ್ ಸಂತುಷ್ಟನಾದರೂ ಕಾರಣ ನಾನು ರಾಮ್ ರಾಮ್ ಎಂದು ಮತ್ತು ಶ್ಲೋಕಗಳನ್ನು ಹೇಳುತಿದ್ದೆ. ರಾಜನು ರಾಣಿಗೆ ನನ್ನನ್ನು ಉಪಹಾರವಾಗಿ ಕೊಟ್ಟನು ರಾಣಿಯೂ ಧಾರ್ಮಿಕ ಪ್ರವೃತ್ತಿಯಾವರಾಗಿದ್ದರು. ರಾಣಿಯು ಬಂಗಾರದ ಪಂಜಾರದೊಳಗೆ ಇರಿಸಿದರು. ನನ್ನ ಬಂಧನ ಮತ್ತಷ್ಟು ಕಟುವಾಯಿತು ತಾಜಾ ಹಣ್ಣುಗಳು ಸ್ವಚ್ಛ ವಾಯು ಕಾಣದೆ ಪರಿತಪಿಸಿದೆನು.. ಇಷ್ಟೆಲ್ಲ ಆದರೂ ನಾನು ಹೇಗೆ ಹೇಳಲಿ ರಾಮ ನಾಮದಿಂದ ದೊರಕುವುದು ಮುಕ್ತಿ… ತಾವೇ ಈ ಬಂಧನದಿಂದ್ ಮುಕ್ತಿ ದೊರಕಿಸಿ ಎಂದು ಋಷಿ ಮುನಿಗೆ ಬೇಡಿಕೊಂಡಿತು. ಆಗ ಋಷಿಗಳು ಹೇಳುತ್ತಾರೆ ನಾಳೆ ಊಟ ಮಾಡಿ ಕೆಲವು ಹೊತ್ತು ಕಣ್ಣು ಮುಚ್ಚಿ ಮಲಗು ಯಾರು ಎಬ್ಬಿಸಿದರು ಏಳಬೇಡ ಎಂದರು ಮರುದಿನ ಗಿಳಿ ಕಣ್ಣು ತೆರೆಯಲೇ ಇಲ್ಲ ಸೇವಕಿಯರು ರಾಣಿ ಎಲ್ಲರು ಪ್ರಯತ್ನಿಸಿದರು ರಾಣಿ ಗಿಳಿ ಮೃತವಾಯಿತೆಂದು ಬಹಳ್ ದುಃಖಿತಲಾದಳು ಪಂಜರದಿಂದ ಹೊರತೆಗೆದು ಮಣ್ಣಿನಲ್ಲಿ ಹೂತುಹಾಕುವಂತೆ ಸೇವಕರಿಗೆ ಹೇಳಿದಳು. ಮಣ್ಣಿನಲ್ಲಿ ಹೂಡಲು ಹೊರಟಾಗ ಗಿಳಿ ಹಾರಿ ಗುರು ಸಿಕ್ಕರೆ ಬಂಧನದಿಂದ ಮುಕ್ತಿ ಎಂದು ಹಾರಿ ಹೋಯಿತು. ಹೀಗೆ ಜೀವನದಲ್ಲಿ ಗುರುವಿನ ಪಾತ್ರ ಬಹು ಮುಖ್ಯ ನೆಲದ ಮೇಲಿನ ಹಾಳೆಗೂ ಗುರುವೆಂಬ ಗಾಳಿ ಸೋಕಿದರೆ ಗಗನದೆತ್ತರಕ್ಕೆ ಹಾರುವುದು ಗಾಳಿಪಟ ರಾಮ ನಾಮ ಗುರುವಿನ ಮಾರ್ಗದರ್ಶನ ಬದುಕಿನ ಬಂಧಗಳ ಮುಕ್ತಿ.

