ಪಥಸಂಚಲನದಲ್ಲಿ ಯೂತ್ ರೆಡ್‌ ಕ್ರಾಸ್ ಸ್ವಯಂಸೇವಕರ ಪಡೆಗೆ ಅವಕಾಶ

ಮಂಗಳೂರು: ನಗರದ ನೆಹರು ಮೈದಾನದಲ್ಲಿ ಆ.15 ರಂದು ನಡೆಯಲಿರುವ ದ.ಕ. ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯ ಪಥಸಂಚಲನದಲ್ಲಿ ಯೂತ್ ರೆಡ್‌ಕ್ರಾಸ್ ಸ್ವಯಂ ಸೇವಕರು ಭಾಗವಹಿಸಲಿದ್ದಾರೆ.

ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳದ ಜತೆಗೆ ಇದೇ ಪ್ರಥಮ ಬಾರಿಗೆ ಯೂತ್ ರೆಡ್‌ಕ್ರಾಸ್‌ಗೆ ಅವಕಾಶ ಕಲ್ಪಿಸಲಾಗಿದೆ. ಯೇನೆಪೊಯ ವಿ.ವಿ. ಹಾಗೂ ಮಂಗಳೂರು ವಿ.ವಿ.ಯ ವಿವಿಧ ಕಾಲೇಜುಗಳ ಯೂತ್ ರೆಡ್‌ಕ್ರಾಸ್ ಘಟಕದ ಒಟ್ಟು 11 ವಿದ್ಯಾರ್ಥಿಗಳು ಮತ್ತು 12 ವಿದ್ಯಾರ್ಥಿನಿಯರು ವಿಶೇಷ ಸಮವಸ್ತ್ರ ಧರಿಸಿ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ. ದ.ಕ. ಜಿಲ್ಲಾಡಳಿತ ಪ್ರಥಮ ಬಾರಿಗೆ ಯೂತ್ ರೆಡ್‌ ಕ್ರಾಸ್‌ಗೆ ಪಥಸಂಚಲನದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದು, ದ.ಕ. ಜಿಲ್ಲಾ ರೆಡ್‌ ಕ್ರಾಸ್‌ಗೆ ಇದು ಹೆಮ್ಮೆ ಹಾಗೂ ಅವಿಸ್ಮರಣೀಯ ಕ್ಷಣವಾಗಿದೆ ಎಂದು ದ.ಕ. ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *