ರೈತ-ದೇಶದ ಅನ್ನದಾತ- Poem by Chidananda

✍️ ಚಿಮಕ
ಚಿದಾನಂದ ಮಲ್ಲಿಕಾರ್ಜುನ ಕಲ್ಯಾಣಿ

ಮಣ್ಣಿನ ಮಡಿಲಲ್ಲಿ ಬೆವರು ಸುರಿಸುವವನು,
ನಾಡಿನ ಹೊಟ್ಟೆಗೆ ಅನ್ನ ನೀಡುವವನು,
ಬಿಸಿಲು ಮಳೆಯೆನ್ನದೆ ದುಡಿಯುವವನು,
ಭೂಮಿತಾಯಿಯ ಮುದ್ದಿನ ಮಗನಿವನು.

ಬೀಜ ಬಿತ್ತಿ ಬೆಳೆ ಬೆಳೆಸುವನು,
ಬದುಕಿನ ದೀಪವನು ಬೆಳಗಿಸುವನು,
ತನ್ನ ನೋವನ್ನು ಮರೆತು ನಗುವನು,
ಎಲ್ಲರ ಹಸಿವನು ನೀಗಿಸುವನು.

ರೈತನ ಕೈಯಲ್ಲಿ ದೇಶದ ಭಾಗ್ಯ,
ಅವನ ಶ್ರಮವೇ ನಮ್ಮ ಸೌಭಾಗ್ಯ,
ರೈತನ ಬದುಕು ಎಂದೆಂದೂ ಬೆಳಗಲಿ,
ನಾಡಿನ ಕೀರ್ತಿ ಸದಾ ಉಳಿಯಲಿ.

Leave a Reply

Your email address will not be published. Required fields are marked *