ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿಯಲ್ಲಿ ಜನರ ಸಹಯೋಗದೊಂದಿಗೆ ಅಭಿವೃದ್ಧಿ ಮಾಡಲು ನಾವು ಅಧಿಕಾರಿಗಳು ಉತ್ತಾಹಿತರಾಗಿದ್ದೇವೆ. ಜನರು ತಮ್ಮ ಸ್ಥಳೀಯ ಸಮಸ್ಯೆಗಳನ್ನು ಮತ್ತು ಬೇಕಾಗುವ ಅಭಿವೃದ್ಧಿ ಯೋಜನೆ ಮಾಹಿತಿಯನ್ನು ನಮಗೆ ಬರೆದು ನೀಡಿದರೆ ಹಣಕಾಸು ಒದಗಿಸಲು ಸಾಧ್ಯವಾಗುತ್ತದೆ ಎಂದು ಮಂಗಳೂರು ಸ್ಮಾರ್ಟ್ ಸಿಟಿಯ ಟೆಕ್ನಿಕಲ್ ವಿಭಾಗದ ಚೀಫ್ ಮೆನೆಜರ್ ಅರುಣ್ ಪ್ರಭಾ ಕೆಎಸ್ ನುಡಿದರು.
ಅವರು ಮೇರಿಹಿಲ್ ಬಳಿಯ ಪ್ರಥ್ವಿ ಸೇವಾ ಟ್ರಸ್ಟ್ ಮತ್ತು ವ್ಯಾಲಿವೀವ್ ಲೇಅವ್ಟ್ ನಾಗರಿಕ ಸಮಿತಿಯ ಸಹಯೋಗದೊಂದಿಗೆ ಮೇರಿಹಿಲ್‌ನ ಗುರುನಗರದಲ್ಲಿ ನಡೆದ 80ನೇ ಸ್ವಾತಂತ್ರ್ಯ ಉತ್ಸವದ ಪ್ರಯುಕ್ತ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.







ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಪತ್ರಕರ್ತರು ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ, ಸ್ವಾತಂತ್ರ್ಯದ ಅನುಭವವನ್ನು ನೆರೆಯ ಮತ್ತು ಜೊತೆಯಲ್ಲಿ ಇರುವವರ ಸ್ವತಂತ್ರ ಆಲೋಚನೆಗೆ ಮಹತ್ವ ನೀಡುವ ಮೂಲಕ ಉಳಿಸಿಕೊಂಡು ಹೋಗಬೇಕು. ನಮ್ಮ ಮನಬಂದಂತೆ ಮಾಡಿ ಇತರರ ಮನ,ಮನೆಯ, ಮೇಲೆ ಬಂಧನಗಳು ಹೇರದೆ ವಿವಿಧತೆಯಲ್ಲಿ ಏಕತೆಯನ್ನು ಸಂಭ್ರಮಿಸಬೇಕು ಎಂದರು. ಮಾಜಿ ವಾಯುಸೇನಾಧಿಕಾರಿ ರಾಮಚಂದ್ರ ಭಟ್ ಅವರು ಧ್ವಜಾರೋಹಣ ಮಾಡಿದರು ರಾಷ್ಟ್ರಗೀತೆಗಳನ್ನು ಹಾಡಲಾಯಿತು.
ವೇದಿಕೆಯಲ್ಲಿ ಪ್ರಥ್ವಿ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಲೋಲಾಕ್ಷಿ ಫರ್ನಾಂಡಿಸ್ ಹಾಗೂ ವ್ಯಾಲಿ ವ್ಯೂವ್ ನಾಗರಿಕರ ಸಮಿತಿಯ ಅಧ್ಯಕ್ಷರಾದ ಜೋ ಟೆಲಿಸ್ ಅವರು ಉಪಸ್ಥಿತರಿದ್ದರು. ಅವರು ಕಾರ್ಯಕ್ರಮದಲ್ಲಿ ವಂದನಾರ್ಪಣೆ ಸಲ್ಲಿಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಹಾಗೂ ಪರಿಸರವಾದಿಗಳಾದ ಪಿ. ಕೃಷ್ಣಪ್ಪ ಅವರು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ತಮ್ಮ ಉಪಸ್ಥಿತಿಯಿಂದ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಇವರೊಂದಿಗೆ ಹಲವು ಗಣ್ಯರು, ಸ್ಥಳೀಯ ನಾಗರಿಕರು, ಸ್ವಯಂಸೇವಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಯಶಸ್ವಿಗೊಳಿಸಿದರು.
