ರೇಮಂಡ್ ಡಿಕೂನಾ ತಾಕೊಡೆ ಅವರಿಗೆ ಸೌರಭ ರತ್ನ ಮಾಧ್ಯಮ 2025 ಪ್ರಶಸ್ತಿ: ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರಧಾನ

ಮಂಗಳೂರು: ಪ್ರಶಸ್ತಿಗಳು ಅರಸಿ ಬಂದಾಗ ನಿರಾಕರಣೆ ಮಾಡಬಾರದು. ಅವುಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚು ಮಾಡಿ ಸಮಾಜದ ಆಯ್ದವರು ಆಗಿ ಸೇವೆ ಮಾಡಲು ಪ್ರೋತ್ಸಾಹ ನೀಡುತ್ತವೆ ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ನುಡಿದರು.

ಅವರು ಮುಡಿಪುವಿನ ಭಾರತೀ ಅನುದಾನಿತ ಶಾಲೆಯ ಸಭಾಂಗಣದಲ್ಲಿ ರೇಮಂಡ್ ಡಿಕೂನಾ ತಾಕೊಡೆ ಅವರಿಗೆ ಸೌರಭ ರತ್ನ ಮಾದ್ಯಮ 2025 ಪ್ರಶಸ್ತಿ ಪ್ರಧಾನ ಮಾಡಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ‌ಸಾಹಿತಿ ಬೆಂಗಳೂರಿನ ‌ಲಕ್ಷ್ಮಣಮೂರ್ತಿ‌ ಮಾತನಾಡಿದರು.

ಈ ಕಥಾ ಬಿಂದು ಪ್ರಕಾಶನದಿಂದ ಕೊಡಲ್ಪಟ್ಟ ಪ್ರಶಸ್ತಿ ನಿಜವಾಗಿಯೂ ಸೌರಭವಾಗಿದೆ. 22‌ ಪುಸ್ತಕಗಳನ್ನು ಬರೆದು ಪ್ರಕಟಿಸಿದ ರೇಮಂಡ್ ಅವರು ಹಿರಿಯ ಪತ್ರಕರ್ತರು ಹಾಗೂ ಬಹುಭಾಷಾ ಸಾಹಿತಿಗಳು.

ಕೊಂಕಣಿ ಮಾತೃಭಾಷೆ ಅದರೂ ತುಳು,ಇಂಗ್ಲಿಷ್, ಕನ್ನಡದ ನಿರಂತರ ಸಾಹಿತಿಗಳು ಎಂದರು. ಇಂತಹ ಹಿರಿಯರು ಸನ್ಮಾನಗೊಂಡಾಗ ಇನ್ನೂ ಹೆಚ್ಚಿನ ಸಾಹಿತ್ಯ ಸೇವೆಗೆ ಅನುವು ಆಗುತ್ತದೆ ಎಂದರು.

ಕಥಾಬಿಂದು ಸಂಸ್ಥೆಯ ಪ್ರದೀಪ್ ಕುಮಾರ್ ಸ್ವಾಗತಿಸಿ ಸುನಿತಾ ಪ್ರದೀಪ್ ಕುಮಾರ್ ವಂದಿಸಿದರು.

Leave a Reply

Your email address will not be published. Required fields are marked *