ಆ. 23ರಂದು ಬೆಂಗಳೂರಿನಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ

ಬೆಂಗಳೂರು, ಆಗಸ್ಟ್ 21: ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಮತ್ತು ಜಾಲಹಳ್ಳಿ ಫಾತಿಮಾ ಚರ್ಚ್ ಕೊಂಕಣಿ ಕುಟುಂಬ ಸಹಯೋಗದಲ್ಲಿ ಆ. 23ರಂದು ಬೆಂಗಳೂರಿನಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ ಆಯೋಜಿಸಲಾಗಿದೆ.

1992 ರಲ್ಲಿ ಕೊಂಕಣಿ ಭಾಷೆಗೆ ಆಗಸ್ಟ್ 20ರಂದು ಸಂವಿಧಾನದ ಎಂಟನೇ ಪರಿಚ್ಛೇದದ ಮಾನ್ಯತೆ ದೊರೆಯಿತು. ಈ ಹಿನ್ನೆಲೆಯಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಜಾಲಹಳ್ಳಿ ಕುವೆಂಪು ನಗರ ನಾಯ್ಡು ಲೇಔಟ್ ಶ್ರೀರಾಮ ಸಮೀಕ್ಷಾ ಅಪಾರ್ಟ್‌ಮೆಂಟ್ ಇವರ ಕ್ಲಬ್ ಹೌಸ್ ನಲ್ಲಿ 23 ಆಗಸ್ಟ್ ಮಧ್ಯಾಹ್ನ 2.30ರಿಂದ ಆಚರಿಸಲಾಗುವುದು.
ಕಾರ್ಯಕ್ರಮ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ರಾಜ್ಯಾಧ್ಯಕ್ಷರಾದ ರೇಮಂಡ್ ಡಿಕೂನಾ ತಾಕೊಡೆ ಉದ್ಘಾಟನೆ ಮಾಡುವವರು.
ಕನ್ನಡದ ಯಶಸ್ವಿ ನಟ ಸಂದೀಪ್ ಮಲಾನಿ ಮುಖ್ಯ ಅತಿಥಿಗಳಾಗಿ ‌ಮತ್ತು ಸೈಂಟ್ ಬೆನೆಡಿಕ್ಟ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಉರ್ಬನ್ ಡಿಸೋಜ ಅಧ್ಯಕ್ಷತೆ ವಹಿಸುವರು.

ಕೊಂಕಣಿಯು ಆಯಾ ರಾಜ್ಯಗಳ ಅಧಿಕೃತ ಭಾಷೆಗಳಲ್ಲಿ ಸಾಹಿತ್ಯದ ಕೃಷಿ ಮಾಡಿದ ಪಂಚ ಲಿಪಿಗಳ ಭಾಷೆಯಾಗಿದೆ. ಕರ್ನಾಟಕದಲ್ಲಿ ಕನ್ನಡ, ಕೇರಳದ ಮಲಯಾಳಂ, ಗೋವಾದಲ್ಲಿ ದೇವನಾಗರಿ, ರೋಮಿ ಮತ್ತು ಪರ್ಶಿಯನ್ ಲಿಪಿಗಳಲ್ಲಿ ಅಪಾರವಾದ ಸಾಹಿತ್ಯ ರಚಿಸಲಾಗಿದೆ.
ಕರ್ನಾಟಕದ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ 1974 ರಲ್ಲಿ ಆರಂಭವಾಗಿ ಈಗ ಐವತ್ತೆರಡು ವರ್ಷಗಳಲ್ಲಿ ಈ ಸಾಂವಿಧಾನಿಕ ಮಾನ್ಯತೆಗಾಗಿ ಶ್ರಮಿಸಿದ ಹಿರಿಯ ಸಂಸ್ಥೆಯಾಗಿದೆ.

ಬೆಂಗಳೂರಿನ ಜಾಲಹಳ್ಳಿಯ ಪ್ರದೇಶದಲ್ಲಿ ಕಳೆದ‌ ಮೂರು ವರ್ಷಗಳ ಮೊದಲು “ಕೊಂಕಣಿ ಕುಟಮ್” ಸಂಘಟನೆಯನ್ನು ಕೆಬಿಎಂಕೆಯ ಅಧ್ಯಕ್ಷರಾದ ರೇಮಂಡ್ ಡಿಕೂನಾ ತಾಕೊಡೆ ಮಂಗಳೂರಿನಿಂದ ಬಂದು ಆರಂಭ ಮಾಡಿದರು.
ಈ ಬಾರಿಯೂ ಸುಮಾರು ನೂರೈವತ್ತು ಕುಟುಂಬದ ಕೊಂಕಣಿ ಮಾತೃಭಾಷೆ ಸದಸ್ಯರು ಇರುವ ಜಾಲಹಳ್ಳಿ ಪ್ರದೇಶದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೊಂಕಣಿ ಸಾಂಸ್ಕೃತಿಕ ವೈಭವದ ಒವಿಯೊ, ವೇರ್ಸ್ ಮತ್ತು ಕೊಂಕಣಿ ಗೀತೆಗಳ ಹಾಡು ಮತ್ತು ಹಾಡುಗಳ  ಸ್ಪರ್ಧೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *