ಜಿಲ್ಲಾ ಮಟ್ಟದ ಗಣಿತ ವಿಜ್ಞಾನ ಮೇಳದಲ್ಲಿ ಅಂಬಿಕಾ ಸಿಬಿಎಸ್‍ಇ ವಿದ್ಯಾರ್ಥಿಗಳಿಗೆ ಬಹುಮಾನ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯ ವಿದ್ಯಾರ್ಥಿಗಳು ವಿದ್ಯಾಭಾರತಿ ವತಿಯಿಂದ ಪುತ್ತೂರಿನ ನೆಹರೂ ನಗರದ ವಿವೇಕಾನಂದ ಸಿ.ಬಿ.ಎಸ್.ಇ ಶಾಲೆಯಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾಮಟ್ಟದ ಗಣಿತ ವಿಜ್ಞಾನ ಮೇಳದ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಹಲವು ಬಹುಮಾನಗಳನ್ನು ಗಳಿಸಿದ್ದಾರೆ.

ಕಿಶೋರ್ ವರ್ಗದ ಬಾಲಕರ ವಿಭಾಗದಲ್ಲಿ ಮೊಟ್ಟೆತ್ತಡ್ಕದ ನಿವಾಸಿ ಎರದಾಸಪ್ಪ ಇ ಮತ್ತು ಜ್ಯೋತಿ ಇ ದಂಪತಿಯ ಪುತ್ರ 9ನೇ ತರಗತಿಯ ಪ್ರೇಮ್ ಇ ವೈದಿಕ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಸಂಪ್ಯದ ನಿವಾಸಿ ಸತೀಶ್ ಬಿ ಮತ್ತು ನಳಿನಿ ಬಿ ದಂಪತಿಯ ಪುತ್ರ 9ನೇ ತರಗತಿಯ ಮೋಕ್ಷಿತ್ ಬಿ ಎಸ್ ವೈದಿಕ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ ದರ್ಬೆಯ ನಿವಾಸಿ ಜಯಂತ್ ಕುಮಾರ್ ಮತ್ತು ರೇಖಾ ಆರ್ ದಂಪತಿಯ ಪುತ್ರಿ 10ನೇ ತರಗತಿಯ ಸೋನಾ ಪೃಥ್ವಿ ವೈದಿಕ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಮೊಟ್ಟೆತ್ತಡ್ಕದ ನಿವಾಸಿ ಶಿವಶಂಕರ ಎಸ್ ದಾನೆಗೊಂಡರ್ ಮತ್ತು ಕೆ ವನಿತಾ ದಂಪತಿಯ ಪುತ್ರಿ 9ನೇ ತರಗತಿಯ ಸೌಪರ್ಣಿಕಾ ಎಸ್ ದಾನೆಗೊಂಡರ್ ಗಣಿತ ಪ್ರಯೋಗ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ಬಾಲ ವರ್ಗದ ಬಾಲಕಿಯರ ವಿಭಾಗದಲ್ಲಿ ಪೆರ್ನೆಯ ನಿವಾಸಿ ಗಿರೀಶ್ ಗೌಡ ಹೆಚ್ ಮತ್ತು ಸುಮಿತ್ರ ದಂಪತಿಯ ಪುತ್ರಿ 8ನೇ ತರಗತಿಯ ಸಾನ್ವಿ ಜಿ ಗಣಿತ ಮಾದರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಕೋಡಿಂಬಾಡಿಯ ನಿವಾಸಿ ಬಿ ವಸಂತ ಗೌಡ ಮತ್ತು ಮೀನಾಕ್ಷಿ ದಂಪತಿಯ ಪುತ್ರಿ 7ನೇ ತರಗತಿಯ ಶ್ರೀಯಾ ವಿ ಎಂ ವೈದಿಕ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಪರ್ಲಡ್ಕದ ನಿವಾಸಿ ವಿನೋದ್ ಕುಮಾರ್ ಪಿ ಸಿ ಮತ್ತು ಯಶೋಧಾ ಕೆ ದಂಪತಿಯ ಪುತ್ರಿ 6ನೇ ತರಗತಿಯ ನೈಮಿಶಾ ಪಿ ವಿ ವೈದಿಕ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.

ಬಾಲ ವರ್ಗದ ಬಾಲಕರ ವಿಭಾಗದಲ್ಲಿ ಬಲ್ನಾಡಿನ ನಿವಾಸಿ ಚೇತನ್ ರಾಮ್ ಕೆ ಮತ್ತು ಸುಜಯ ಎ ಎಸ್ ದಂಪತಿಯ ಪುತ್ರ 8ನೇ ತರಗತಿಯ ಸುಧನ್ವ ಕೆ ವೈದಿಕ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಸಂಪ್ಯದ ನಿವಾಸಿ ಲೋಕನಾಥ್ ಶೆಟ್ಟಿ ಮತ್ತು ದಿವ್ಯ ರೈ ಪಿ ದಂಪತಿಯ ಪುತ್ರ 7ನೇ ತರಗತಿಯ ಸುಧಾಂಶು ಎಲ್ ಶೆಟ್ಟಿ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

Leave a Reply

Your email address will not be published. Required fields are marked *