ಜಗತ್ತಿನ ಯಾವ ಮೂಲೆಯಲ್ಲಿದ್ದರೂ ತುಳುನಾಡಿಗೆ, ತುಳು ಭಾಷೆಗೆ ಪ್ರಾಮುಖ್ಯತೆ ಕೊಡುವವರು ನಮ್ಮ ತುಳುನಾಡಿನವರು. ಮಾತೃಭಾಷೆಯು ಹೃದಯಕ್ಕೆ ಹತ್ತಿರವಾದ ಭಾಷೆಯು ಆಗಿದ್ದು ಸಂವಹನ ಮಾಡುತ್ತಿರುವಾಗ ಭಾವನೆಗಳು ಹೊರಹೊಮ್ಮಿ ಆಪ್ತತೆಯ ನಿಕಟತೆಯು ಮೇಳೈಸಿ ಅಪ್ಯಾಯಮಾನವಾದ ಬಂಧುತ್ವವು ಬೆಸೆಯುತ್ತದೆ. ಆದ್ದರಿಂದ ತುಳು ಭಾಷಾಭಿಮಾನಿಗಳು ತಮ್ಮ ಮಾತೃಭಾಷೆಯನ್ನು ಮನಸಾ ಪ್ರೀತಿಸಿ ಬೆಳೆಸುವುದು ಅವರ ಹಿರಿಮೆಗೊಂದು ಗರಿ. ಅದಕ್ಕೆ ಸಾಕ್ಷಿ ಎಂಬಂತೆ ಕರಾವಳಿ ಪ್ರದೇಶದಲ್ಲಿ ವಾಸಿಸುವವರು ಅತ್ಯಧಿಕವಾಗಿ ತುಳುವರೇ ಆಗಿದ್ದು ತುಳು ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸಬೇಕೆಂಬ ತುಳುವರ ಆಂತರ್ಯದ ಧ್ವನಿಯು ಊರು, ಪರವೂರುಗಳಲ್ಲಿ ಪ್ರತಿಧ್ವನಿಸುವುದನ್ನು ಕೇಳುತ್ತಾ ಇದ್ದೇವೆ. ಆ ನಿಟ್ಟಿನಲ್ಲಿ ‘ತುಲುವೆರ ಕಲ’ ಎಂಬ ಸಂಸ್ಥೆಯು ಗೀತಾ ಲಕ್ಷ್ಮೀಶ್ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡದಾದ್ಯಂತ ತುಳು ಭಾಷೆಯ ಉಳಿವಿಗಾಗಿ ಸತತ ಪರಿಶ್ರಮ ಪಡುತ್ತಿದ್ದು , ತುಳು ಲಿಪಿಯನ್ನು ಆಸಕ್ತಿ ಉಳ್ಳವರಿಗಾಗಿ ಕಲಿಸುತ್ತಿದ್ದು ತುಳು ಬಾಷೆಯ ಅಸ್ಮಿತೆಯನ್ನು ಉಳಿಸುವಲ್ಲಿ ಬಹುತೇಕ ಶ್ರಮಿಸುತ್ತಿದೆ. ಯಾವುದೇ ಸಂಘ ಸಂಸ್ಥೆಯನ್ನು ಹುಟ್ಟು ಹಾಕುವ ಉದ್ಧೇಶ ಅದು ಜನಸಾಮಾನ್ಯರಿಗೆ ತಲುಪುವಂತಾಗಬೇಕು. ಅದರ ಧ್ಯೇಯಗಳು ಉತ್ತಮ ವಿಚಾರಗಳನ್ನು ಹೊಂದಿದ್ದು ಸಮಾಜಕ್ಕೆ ಅನುಕೂಲವಾದರೆ ಅದರ ಸೃಷ್ಟಿ ಸಾರ್ಥಕತ್ಯೆಯನ್ನು ಪಡೆಯಲು ಸಾಧ್ಯ.
ಮುಂಬೈಯಲ್ಲಿ ತುಳು ಭಾಷೆಗೆ ಅಧಿಕತಮ ಸ್ಥಾನಮಾನ ಸಿಗಬೇಕು ಎನ್ನುವ ಸದುದ್ಧೇಶದಿಂದ ಮಹತ್ತರವಾದ ಯೋಜನೆಯನ್ನು ರೂಪಿಸಿ ಮುಂಬೈಯಲ್ಲಿ ತುಲುವೆರೆ ಕಲ ಬೊಂಬೈ ಎಗ್ಗೆಯನ್ನು ಹುಟ್ಟು ಹಾಕಿರುವುದು ಅದರ ಹಿರಿಮೆಗೆ ಸಾಕ್ಷಿಯಾಗಿದೆ. ತುಲುವೆರೆ ಕಲ ಮುಂಬೈ ವಲಯದ ಪ್ರಥಮ ವರ್ಷದ ವಾರ್ಷಿಕೋತ್ಸವ “ತುಲುವೆರೆ ಕಲತೋಚ್ಚಯ” ಕಾರ್ಯಕ್ರಮವು ಅಗಸ್ಟ್ 30, ಅದಿತ್ಯವಾರದಂದು ಮಧ್ಯಾಹ್ನ 2.30 ಗಂಟೆಯಿಂದ ಡೊಂಬಿವಿಲಿಯ ಪ್ರೀತಿ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿಜೃಂಭಣೆಯಿಂದ ಜರಗಲಿದೆ.
ತುಲುವೆರೆ ಕಲ(ರಿ) ಬೊಂಬೈ ಎಗ್ಗೆಯನ್ನು ಮುಂಬೈಯಲ್ಲಿ ಸ್ಥಾಪಿಸಿ ಅದರ ಮುಖೇನ ತುಳುವರು ತುಳು ಭಾಷೆಯ ತೇರನ್ನು ಹೊರನಾಡಿನಲ್ಲೂ ಎಳೆದು ಅದರ ಹಿರಿಮೆಯನ್ನು ಉನ್ನತ ಸ್ಥಾನದಲ್ಲಿರಿಸಬೇಕು ಎನ್ನುವ ಸದುದ್ಧೇಶದಿಂದ ಸತತ ಪ್ರಯತ್ನವನ್ನು ಮಾಡುತ್ತಿರುವುದು ಶ್ಲಾಘನೀಯ. ಈ ಸಮಾರಂಭದ ಅಧ್ಯಕ್ಷತೆಯನ್ನು ತುಲುವೆರೆ ಕಲ ಬೊಂಬೈ ಎಗ್ಗೆಯ ಅಧ್ಯಕ್ಷೆ ಪ್ರಪುಲ್ಲ ದಿನೇಶ್ ಶೆಟ್ಟಿ , ಸಹ ಅಧ್ಯಕ್ಷ ಸ್ಥಾನವನ್ನು ತುಲುವೆರೆ ಕಲದ ಸಂಸ್ಥಾಪಕಿ , ತುಲು ಲಿಪಿಯ ಶಿಕ್ಷಕಿ ಗೀತಾ ಲಕ್ಷ್ಮೀಶ್ ವಹಿಸಲಿದ್ದಾರೆ.
ಉದ್ಘಾಟನೆಯನ್ನು ಕೃಷ್ಣಿ ಎಂ.ಶೆಟ್ಟಿ, ಮಾಜಿ ಮಹಿಳಾ ಕಾರ್ಯಾಧ್ಯಕ್ಷೆ, ಬಂಟರಸಂಘ ಡೊಂಬಿವಿಲಿ ಸಮಿತಿ ಮಾಡಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಡಾ.ದಿವಾಕರ್ ಟಿ. ಶೆಟ್ಟಿ ಇಂದ್ರಾಳಿ, ಅಧ್ಯಕ್ಷರು, ಕರ್ನಾಟಕ ಸಂಘ ಡೊಂಬಿವಿಲಿ , ಸುಬ್ಬಯ್ಯ ಎ. ಶೆಟ್ಟಿ, ಉಪ ಕಾರ್ಯಾಧ್ಯಕ್ಷರು, ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿ, ಬಂಟರ ಸಂಘ ಮುಂಬೈ, ಶಂಕರ್ ಶೆಟ್ಟಿ, ಮಾಜಿ ಅಧ್ಯಕ್ಷರು, ಆದಿಶಕ್ತಿ ಕನ್ನಡ ಸಂಘ , ಮಾಜಿವಾಡ ,ಥಾಣೆ, ರಾಮಣ್ಣ ಭಂಡಾರಿ,ವಕೀಲರು, ಹೈಕೋರ್ಟ್, ಮುಂಬೈ, ಪ್ರಸನ್ನ ಎನ್.ಶೆಟ್ಟಿ, ಬೆಳ್ಳಂಪಳ್ಳಿ, ಕುಕ್ಕಿಕಟ್ಟೆ, ಹೋಟೆಲ್ ಉದ್ಯಮಿ ಮತ್ತು ಸಮಾಜಸೇವಕರು, ಅರುಣ್ ಎಸ್.ಶೆಟ್ಟಿ , ಪಡುಕುಡೂರ್, ಕಾರ್ಯಾಧ್ಯಕ್ಷರು, ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿ ,ಬಂಟರ ಸಂಘ ಡೊಂಬಿವಿಲಿ ಸಮಿತಿ, ಹರೀಶ್ ಎಸ್.ಶೆಟ್ಟಿ ಪಡುಕುಡೂರು, ಹೋಟೆಲ್ ಉದ್ಯಮಿ ಮತ್ತು ಸಮಾಜಸೇವಕರು, ಕುಂಠಿನಿ ಪ್ರಕಾಶ್ ಹೆಗ್ಡೆ, ಸಂಪಾದಕರು, ಛಾಯಾ ಕಿರಣ ಮಾಸ ಪತ್ರಿಕೆ,ಮುಂಬೈ, ಉದಯ ಜೆ.ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ, ಸಿರಿನಾಡ ವೆಲ್ಪೇರ್ ಅಸೋಸಿಯೇಷನ್, ಡೊಂಬಿವಿಲಿ, ಮಂಜುಳಾ ಎಸ್.ಶೆಟ್ಟಿ, ಅಧ್ಯಕ್ಷೆ, ಭ್ರಾಮರಿ ಯಕ್ಷ ನೃತ್ಯ ಕಲಾ ನಿಲಯ ಚ್ಯಾರಿಟೇಬಲ್ ಟ್ರಸ್ಟ್, (ರಿ) ಮುಂಬೈ, ಜಯಂತ್ ಶೆಟ್ಟಿ, ಉಪ ಕಾರ್ಯದರ್ಶಿ, ಬಂಟರ ಸಂಘ ಡೊಂಬಿವಿಲಿ ಸಮಿತಿ ಇವರು ಆಗಮಿಸಲಿದ್ದಾರೆ .


ಈ ಕಾರ್ಯಕ್ರಮದಲ್ಲಿ ತುಳು ಕವನಗಳಿಗೆ ಆದ್ಯತೆ ನೀಡುವ ಸಲುವಾಗಿ ತುಳು ಹಾಸ್ಯ ಹನಿಗವನ ಕವಿಗೋಷ್ಠಿಯನ್ನು ಆಯೋಜಿಸಿದ್ದು ಇದರ ಅಧ್ಯಕ್ಷತೆಯನ್ನು ಖ್ಯಾತ ಸಾಹಿತಿ, ರಂಗ ನಿರ್ದೇಶಕರಾದ ನಂದಳಿಕೆ ನಾರಾಯಣ ಶೆಟ್ಟಿಯವರು ವಹಿಸಲಿದ್ದಾರೆ. ಊರು ಮತ್ತು ಮಹಾರಾಷ್ಟ್ರದ ಕವಿಗಳು ಭಾಗವಹಿಸಲಿದ್ದು ಅಶೋಕ್ ಪಕ್ಕಳ, ಸೋಮನಾಥ ಕರ್ಕೇರ, ಲಕ್ಷ್ಮೀನಾರಾಯಣ ರೈ ಹರೇಕಳ, ರಮಣ್ ಶೆಟ್ಟಿ ರೆಂಜಾಳ, ಶಾರದಾ ಅಂಚನ್, ಕುಮುದಾ ಡಿ.ಶೆಟ್ಟಿ, ಪ್ರಪುಲ್ಲ ಡಿ. ಶೆಟ್ಟಿ, ಶೋಭಾ ಎಸ್.ಶೆಟ್ಟಿ ನೆಲ್ಲಿದಡಿಗುತ್ತು, ಮೈನಾ ಪಿ.ಶೆಟ್ಟಿ, ಸವಿತಾ ಸಿ ಸಾಲ್ಯಾನ್, ಸರ್ವಮಂಗಳಾ ಶೆಟ್ಟಿ, ದೀಪಾ ಎಚ್.ಶೆಟ್ಟಿ, ಕಾಂತಿ ಶೆಟ್ಟಿ, ಸತೀಶ್ ಶೆಟ್ಟಿ ಕಣಂಜಾರು, ಸೂರಿ ಮಾರ್ನಾಡ್ , ರೇಮಂಡ್ ಡಿಕೋನಾ ತಾಕೊಡೆ, ಶ್ಯಾಮ್ ಪ್ರಸಾದ್ ಭಟ್, ಶ್ರೀಶಾವಾಸವಿ ತುಳುನಾಡ್, ಚಂದ್ರಹಾಸ ಕುಂಬಾರ ಬಂದಾರು, ಮುರಳೀಧರ ಆಚಾರ್ಯ, ಪದ್ಮನಾಭ ಪೂಜಾರಿ ಬಂಟ್ವಾಳ, ಸೌಮ್ಯ ಆರ್.ಶೆಟ್ಟಿ, ಸವಿತಾ ಕರ್ಕೇರ ಕಾವೂರು, ಪ್ರಶಾಂತ್ ಎನ್.ಆಚಾರ್ಯ , ಪದ್ಮನಾಭ ಮಿಜಾರ್, ಹರೀಶ್ ನಾಯಕ್, ಜಯರಾಮ್ ಡಿ. ಪಡ್ರೆ, ಸುಧೀರ್ ಶೆಟ್ಟಿ, ಹರೀಶ್ ಕುಮಾರ್ ಮೆಲ್ಕಾರ್, ಪ್ರೇಮಾ ಆರ್.ಶೆಟ್ಟಿ ಮೂಲ್ಕಿ, ದಿಯಾ ಉದಯ್ ಮೂಲ್ಕಿ, ಆಯೇಷಾ ಪೆರ್ನೆ, ಮಾಲತಿ ಪೈ ಇವರೆಲ್ಲರ ಉಪಸ್ಥಿತಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದೆ.
ಈ ಕಾರ್ಯಕ್ರಮದಲ್ಲಿ ಎರಡು ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ. ಶೋಭಾ ಎಸ್.ಶೆಟ್ಟಿ ನೆಲ್ಲಿದಡಿಗುತ್ತು ಇವರ “ಮಾಯದ ತುಡರ್ ” ಕವನ ಸಂಕಲನವು ಆದಿಶಕ್ತಿ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಶಂಕರ್ ಶೆಟ್ಟಿ ಇವರ ದಿವ್ಯ ಹಸ್ತದಿಂದ ಲೋಕಾರ್ಪಣೆಗೊಳ್ಳಲಿದೆ. ಈ ಕವನ ಸಂಕಲನದ ಪರಿಚಯವನ್ನು ಖ್ಯಾತ ಸಾಹಿತಿ , ನಿರೂಪಕರಾದ ಅಶೋಕ್ ಪಕ್ಕಳ ಮಾಡಲಿದ್ದಾರೆ. ಇನ್ನೊಂದು ಪ್ರಪುಲ್ಲ ಡಿ.ಶೆಟ್ಟಿಯವರ “ಪೊಲ್ಲಕ್ಕೆನ ಅಜಕೆ” ಎಂಬ ಕವನ ಸಂಕಲನವು ಹರೀಶ್ ಶೆಟ್ಟಿ ಪಡುಕುಡೂರು ಇವರ ದಿವ್ಯಹಸ್ತದಿಂದ ಬಿಡುಗಡೆಗೊಳ್ಳಲಿದೆ. ಈ ಕವನ ಸಂಕಲನದ ಪರಿಚಯವನ್ನು ಐಲೇಸಾದ ಸೂರಿ ಮಾರ್ನಾಡ್ ಮಾಡಲಿದ್ದಾರೆ. ಇಡೀ ಕಾರ್ಯಕ್ರಮದ ನಿರೂಪಣೆಯನ್ನು ಎಚ್ ಕೆ ನಯನಾಡ್ ನಿರ್ವಹಿಸಲಿದ್ದಾರೆ.
ನಿರಂತರವಾಗಿ ತುಳು ಬರಹಗಳನ್ನು ಬರೆದು ತುಳು ಭಾಷೆಯ ಅಸ್ತಿತ್ವಕ್ಕಾಗಿ ಶ್ರಮಿಸುತ್ತಿರುವವರಿಗೆ ತುಲುವೆರ ಕಲ ಸಂಸ್ಥೆಯ ವತಿಯಿಂದ “ಕಲತ್ತ ಬೊಲ್ಲಿ ” ಪುರಸ್ಕಾರ ನೀಡಿ ಗೌರವಿಸಿ ಬರಹಗಾರರನ್ನು ಪ್ರೋತ್ಸಾಹಿಸಲಾಗುತ್ತಿದೆ. ಈ ವರ್ಷದ “ಕಲತ್ತ ಬೊಲ್ಲಿ” ಪುರಸ್ಕಾರ ಎಚ್. ಕೆ. ನಯನಾಡ್ ಮತ್ತು ಕುಮುದಾ ಡಿ.ಶೆಟ್ಟಿ ಅವರಿಗೆ ನೀಡಿ ಸನ್ಮಾನಿಸಲಾಗುತ್ತಿರುವುದು ಪ್ರಶಂಸನೀಯ.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಐ ಲೇಸಾದವರಿಂದ ಸಂಗೀತ ರಸಮಂಜರಿ ಮತ್ತು ನೃತ್ಯ ಕಾರ್ಯಕ್ರಮ ನಡೆಯಲಿವೆ. ತುಳು ಭಾಷೆಯ ಹಿರಿಮೆಯನ್ನು ಸಾರುವುದಕ್ಕಾಗಿ ಆಯೋಜನೆಗೊಂಡ ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ತುಳು- ಕನ್ನಡಿಗರು ಭಾಗವಹಿಸಬೇಕೆಂದು ತುಲುವೆರೆ ಕಲದ ಅಧ್ಯಕ್ಷೆ ಗೀತಾ ಲಕ್ಷ್ಮೀಶ್, ತುಲುವೆರ ಕಲ ಬೊಂಬೈ ಎಗ್ಗೆ ಇದರ ಅಧ್ಯಕ್ಷೆ ಪ್ರಪುಲ್ಲ ಡಿ.ಶೆಟ್ಟಿ, ಕಾರ್ಯದರ್ಶಿ ಶೋಭಾ ಎಸ್.ಶೆಟ್ಟಿ, ಉಪ ಕಾರ್ಯದರ್ಶಿ ಸವಿತಾ ಸಾಲ್ಯಾನ್, ಕೋಶಾಧಿಕಾರಿ ಮೈನಾ ಶೆಟ್ಟಿ , ಸಾಹಿತ್ಯ ಸಮಿತಿಯ ಕುಮುದಾ ಡಿ.ಶೆಟ್ಟಿ, ಸಂಘಟನಾ ಸಮಿತಿಯ ಲಕ್ಷ್ಮೀನಾರಾಯಣ ಹರೇಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
