ಕಾರ್ಕಳ: ತುಳು ಭಾಷೆ, ಸಂಸ್ಕೃತಿ, ಅಸ್ಮಿತೆಯನ್ನು ಜಾಗತಿಕ ಮಟ್ಟಕ್ಕೆ ಪಸರಿಸುವ ನಿಟ್ಟಿನಲ್ಲಿ 1928ರಲ್ಲಿ ಉಡುಪಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ವಿಶ್ವ ತುಳುವ ಮಹಾಸಭಾ ಶತಮಾನೋತ್ಸವದ ಹೊಸ್ತಿಲಲ್ಲಿದೆ. ಇದೀಗ ವಿವಿಧ ರಾಜ್ಯ ಮಾತ್ರವಲ್ಲದೇ 19 ದೇಶಗಳಲ್ಲೂ ತುಳುವ ಮಹಾಸಭಾ ಸ್ಥಾಪನೆಯಾಗಿದೆ ಎಂದು ತುಳುವ ಮಹಾಸಭಾದ ರಾಜ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಹೇಳಿದರು.


ಅವರು ಸೆ. 5ರಂದು ಕಾರ್ಕಳ ಬಾಹುಬಲಿ ಪ್ರವಚನ ಮಂದಿರದಲ್ಲಿ ತುಳುವ ಮಹಾಸಭಾ ಉಡುಪಿ ಜಿಲ್ಲಾಧ್ಯಕ್ಷ ಉದಯ ಕುಮಾರ್ ಹೆಗ್ಡೆ ಎರ್ಲಪ್ಪಾಡಿ ಅವರ ನೇತೃತ್ವದಲ್ಲಿ ನಡೆದ ಕಾರ್ಕಳ ಘಟಕ ರಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಮತ್ತು ರಾಜ್ಯದ ಎರಡನೇ ಭಾಷೆಯಾಗಿ ಘೋಷಿಸಬೇಕು. ಈ ನಿಟ್ಟಿನಲ್ಲಿ ಪೂರಕ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದವರು ತಿಳಿಸಿದರು.
ತುಳು ವರ್ಲ್ಡ್ ಫೌಂಡೇಶನ್ ನಿರ್ದೇಶಕ ರಾಜೇಶ್ ಆಳ್ವ ಮಾತನಾಡಿ, ತುಳು ಭಾಷೆ ಮಾತ್ರವಲ್ಲ, ಅದೊಂದು ವಿದ್ಯೆ, ಸಂಸ್ಕಾರ. ತುಳುನಾಡಿನ ಸಂಸ್ಕೃತಿ ಆಚಾರ ವಿಚಾರವೆಂದರು.
ಮಹಾಸಭಾ ಗೋವಾ ಘಟಕದ ಅಧ್ಯಕ್ಷ ಗಣೇಶ್ ಶೆಟ್ಟಿ ಇರ್ವತ್ತೂರು ಮಾತನಾಡಿ, ತುಳುವ ಎನ್ನಲು ನಮಗೆ ಹೆಮ್ಮೆಯಿದೆ. ವಿಶ್ವದಾದ್ಯಂತ ನೆಲೆಸಿರುವ ತುಳುವರನ್ನು ಒಂದುಗೂಡಿಸುವ ಕಾರ್ಯ ಮಹಾಸಭಾದ ಮೂಲಕವಾಗುತ್ತಿದೆ ಎಂದರು.
ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಮಂಗಳೂರು ಘಟಕದ ಅಧ್ಯಕ್ಷ ಶಿವಪ್ರಸಾದ್ ಅಜಿಲ ಮಾತನಾಡಿದರು.
2028ರ ಸೆ. 23ರಂದು ವಿಶ್ವ ತುಳುವ ಮಹಾಸಭಾಕ್ಕೆ 100 ವರ್ಷ ಪೂರೈಸಲಿದೆ. ಶತಮಾನೋತ್ಸವ ಸಂಭ್ರಮದದ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ 100 ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದರ ಪ್ರಥಮ ಕಾರ್ಯಕ್ರಮ ಉಡುಪಿಯಲ್ಲೇ ನಡೆಯಲಿದ್ದು, ಅಂದು ಜಿಲ್ಲಾಮಟ್ಟದಲ್ಲಿ ತುಳುನಾಡ ಗೊಬ್ಬಲು, ತುಳುನಾಡ ಜನಪದ ಕಲೆ ಕಾರ್ಯಕ್ರಮ ನಡೆಯಲಿದೆ.
ವೇದಿಕೆಯಲ್ಲಿ ತುಳುವೇಶ್ವರಿ ದೇವಸ್ಥಾನ ಸಂಚಾಲಕ ಅರವಿಂದ ಬೆಳ್ಚಡ, ಅಡಪಾಡಿ ಶ್ರೀ ಉಮಾಮಹೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಪುಂಡಲಿಕ ನಾಯಕ್, ಶ್ಯಾಮಲಾ ಕುಂದರ್, ತುಳು ವರ್ಲ್ಡ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ವಸಂತ ರೈ, ವೃಷಭರಾಜ್ ಕಡಂಬ, ಉಡುಪಿ ಜಿಲ್ಲಾ ಸಂಚಾಲಕ ವಿಶ್ವನಾಥ ಆಚಾರ್ಯ, ಅನಂತಪಟ್ಟಾಭಿ ರಾವ್ ಕರ್ವಾಲು, ಮೋಹನ್ ಪಡಿವಾಳ್, ಕಮಲಾಕ್ಷ ನಾಯಕ್ ಜಾರ್ಕಳ, ಪ್ರಭಾಕರ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಕಳ ತಾಲೂಕು ಘಟಕ ಅಧ್ಯಕ್ಷರಾಗಿ ವಿಜಯ ಶೆಟ್ಟಿ
ಸಭೆಯಲ್ಲಿ ಕಾರ್ಕಳ ತಾಲೂಕು ಘಟಕ ಅಧ್ಕಕ್ಷರಾಗಿ ಉದ್ಯಮಿ ವಿಜಯ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಾಧ್ಯಕ್ಷರಾಗಿ ವೃಷಭರಾಜ್ ಕಡಂಬ ಕೇರ್ತಾಡಿಗುತ್ತು, ಸುಮಿತ್ ಶೆಟ್ಟಿ ಕೌಡೂರು, ಸುಧಾಕರ್ ಶೆಟ್ಟಿ ಬಜಗೋಳಿ, ರವೀಂದ್ರ ಶೆಟ್ಟಿ ಮುಂಡ್ಕೂರು, ಅಶೋಕ್ ನಾಯಕ್ ಹಿರ್ಗಾನ, ಬೈಲೂರು ಪ್ರಶಾಂತ್ ಕುಮಾರ್ ಶೆಟ್ಟಿ ಗುತ್ತುಮನೆ, ಗೌರವಾಧ್ಯಕ್ಷರಾಗಿ ಅಡಪಾಡಿ ಶ್ರೀ ಉಮಾಮಹೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಪುಂಡಲಿಕ ನಾಯಕ್, ಕಡಾರಿ ರವೀಂದ್ರ ಪ್ರಭು, ಸಿರಿಯಣ್ಣ ಶೆಟ್ಟಿ ಹಿರ್ಗಾನ, ಉಪಾಧ್ಯಕ್ಷರಾಗಿ ಜೆರಾಲ್ಡ್ ಡಿಸೋಜಾ ಮಿಯ್ಯಾರು, ಪ್ರವೀಣ್ ಹೆಗ್ಡೆ ಕಾರ್ಕಳ, ವಿಖ್ಯಾತ್ ಶೆಟ್ಟಿ ಕಾರ್ಕಳ, ನೀರೆ ರವೀಂದ್ರ ನಾಯಕ್, ಅರುಣ್ ಹೆಗ್ಡೆ ಕಡ್ತಲ, ವಾಸು ಶೆಟ್ಟಿ ಹಿರ್ಗಾನ, ಸಚ್ಚಿದಾನಂದ ಪ್ರಭು ಕಣಜಾರು ಅವರನ್ನು ಆಯ್ಕೆ ಮಾಡಲಾಯಿತು.
ಕೋಶಾಧಿಕಾರಿಯಾಗಿ ಉದಯ ಶೆಟ್ಟಿ ಕುಕ್ಕುಂದೂರು, ಅವಿನಾಶ್ ಶೆಟ್ಟಿ ಕಾರ್ಕಳ, ಕಾರ್ಯದರ್ಶಿಯಾಗಿ ಸುಭಾಷ್ ಹೆಗ್ಡೆ ಅತ್ತೂರು, ಗೀತಾ ಹೆಗ್ಡೆ ಮಾಳ, ರಶ್ಮಿ ಶೆಟ್ಟಿ ಪಳ್ಳಿ ವಿನಯಾ ಡಿ. ಬಂಗೇರಾ, ಶೋಭಾ ಭಾಸ್ಕರ್, ಗೌರವ ಸಲಹೆಗಾರರನ್ನಾಗಿ ಕಮಲಾಕ್ಷ ನಾಯಕ್ ಜಾರ್ಕಳ, ಶ್ಯಾಮಲಾ ಕುಂದರ್, ಮಿತ್ರಪ್ರಭಾ ಹೆಗ್ಡೆ, ಪ್ರಭಾಕರ್ ಬಂಗೇರಾ, ನವೀನ್ ನಾಯಕ್, ಮೋಹನ್ ಪಡಿವಾಳ್, ಅನಂತಪಟ್ಟಾಭಿ ರಾವ್ ಕರ್ವಾಲು, ಎನ್.ಎಂ. ಹೆಗ್ಡೆ ಬೆಳ್ಮಣ್, ದಯಾನಂದ ಹೆಗ್ಡೆ ಕಡ್ತಲ, ಪ್ರಭಾತ್ ಜೈನ್, ಆಂತೋನಿ ಡಿಸೋಜಾ, ಯುವರಾಜ್ ಜೈನ್ ಸಾಣೂರು, ಯಶೋಧಾ ಶೆಟ್ಟಿ ಅಜೆಕಾರ್, ಜಯರಾಂ ಬಂಗೇರಾ ಅವರನ್ನು ಆಯ್ಕೆ ಮಾಡಲಾಯಿತು.
ಸಾಂಸ್ಕೃತಿಕ ಸಮಿತಿ ಸದಸ್ಯರಾಗಿ ಅಶೋಕ್ ಶೆಟ್ಟಿ ಬಂಗ್ಲೆಗುಡ್ಡೆ, ಪದ್ಮಪ್ರಸಾದ್ ಜೈನ್ ನೆಲ್ಲಿಕಾರು, ಪ್ರಸಾದ್ ಶೆಟ್ಟಿ ಪೆರ್ವಾಜೆ, ಸುಜಯ್ ಜತ್ತನ್ನ ಬೈಲೂರು, ಅಶೋಕ್ ಸುವರ್ಣ, ಸತೀಶ್ ರಾವ್ ಕರ್ವಾಲು, ಶ್ರೀನಿವಾಸ ಪೂಜಾರಿ ಎರ್ಲಪ್ಪಾಡಿ, ಪ್ರಚಾರ ಸಮಿತಿ ಸದಸ್ಯರಾಗಿ ರಾಮಚಂದ್ರ ಬರೆಪ್ಪಾಡಿ, ರೋಹಿತ್ ಶೆಟ್ಟಿ ಮಿಯ್ಯಾರು, ಸೌಮ್ಯ ಶೆಟ್ಟಿ ಬೈಲೂರು ಅವರನ್ನು ಆಯ್ಕೆ ಮಾಡಲಾಯಿತು.
