ಕಾರ್ಕಳ: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವತಿಯಿಂದ ಪೇಪರ್ ಲೆಸ್ (ಕಾಗದ ರಹಿತ) ನೋಂದಣಿಯ ಕುರಿತು ತರಬೇತಿ ಕಾರ್ಯಾಗಾರವನ್ನು ಕಾರ್ಕಳದ ಬಂಡಿಮಠ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆಸಲಾಯಿತು.

ಕಾರ್ಕಳ ಉಪ ನೋಂದಣಾಧಿಕಾರಿಗಳ ಕಛೇರಿಯ ವತಿಯಿಂದ ಸಾರ್ವಜನಿಕರು, ವಕೀಲರು, ದಸ್ತಾವೇಜು ಬರಹಗಾರರು, ಗ್ರಾಮ ಒನ್ ಕೇಂದ್ರದವರಿಗೆ ಆಯೋಜಿಸಲಾಗಿದ್ದ ಈ ಕಾರ್ಯಾಗಾರವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ತಾಂತ್ರಿಕ ತಂಡದವರು ನಡೆಸಿಕೊಟ್ಟರು. ಕಾರ್ಕಳ ಉಪ ನೋಂದಣಾಧಿಕಾರಿ ರಹಿಮಾನ್ ಅವರು ಸ್ವಾಗತಿಸಿ, ವಂದಿಸಿದರು.
