ಕಾರಂತರ ಪ್ರವಾಸ ಕಥನಗಳು ವಾಸ್ತವಿಕ ಅನುಭವ ನೀಡುತ್ತದೆ : ಡಾ.ಗಣೇಶ್ ಪ್ರಸಾದ್ ನಾಯಕ್

ಉಡುಪಿ: ಕನ್ನಡ ಸಾಹಿತ್ಯದ ಎಲ್ಲಾ ಬಗೆಯ ಸಾಹಿತ್ಯದಲ್ಲಿ ಕೃತಿ ರಚಿಸಿರುವ ಕಾರಂತರ ಪ್ರವಾಸ ಕಥನಗಳು ವಿಶಿಷ್ಟ ಅಭಿವ್ಯಕ್ತಿ. ಅವರು ಪ್ರವಾಸದ ಕಥನಗಳು ನಾಡಿನ ವಾಸ್ತವ ಅನುಭವವನ್ನು ನಾವು ಅನುಭವಿಸುವಂತೆ ಚಿತ್ರಿಸುತ್ತಾರೆ. ಓದುಗರ ಸಾಂಸ್ಕೃತಿಕ ಮತ್ತು ಕಲಾನ್ಮಕ ಜ್ಞಾನವನ್ನು ಅವು ಹೆಚ್ಚಿಸುತ್ತದೆ ಎಂದು ಪತ್ರಕರ್ತ ಉಪನ್ಯಾಸಕ ಡಾ.ಗಣೇಶ್ ಪ್ರಸಾದ್ ನಾಯಕ್ ಹೇಳಿದರು.

ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಪೂರ್ಣ ಪ್ರಜ್ಞ ಸಂಧ್ಯಾ ಕಾಲೇಜು ಇಲ್ಲಿ ಡಾ.ಶಿವರಾಮ ಕಾರಂತರ ಜನ್ಮದಿನೋತ್ಸವದ ಅಂಗವಾಗಿ ನಡೆದ ಅರಿವಿನ ಬೆಳಕು ಉಪನ್ಯಾಸ ಮಾಲೆ-18 ಕಾರ್ಯಕ್ರಮದಲ್ಲಿ ಡಾ.ಶಿವರಾಮ ಕಾರಂತರ ಪ್ರವಾಸ ಕಥನಗಳ ಸ್ವಾರಸ್ಯಗಳು ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಚಂದ್ರಕಾಂತ ಭಟ್ ಕಾರಂತರ ಕೃತಿಗಳು ವಿದ್ಯಾರ್ಥಿಗಳ ಬೌದ್ದಿಕ ವಿಕಾಸಕ್ಕೆ ಸಹಕಾರಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಕಾರಂತರ ಕೃತಿಗಳು ಯುವ ಜನರಲ್ಲಿ ಬಹುಶಿಸ್ತೀಯ ಅಧ್ಯಯನ ನಡೆಸಲು ಪ್ರೇರೆಪಿಸುತ್ತದೆ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥೆ ಪ್ರಜ್ಞಾ ಮಾರ್ಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವಿದ್ಯಾರ್ಥಿಗಳಾದ ದೇವರಾಜ ಪುತ್ರನ್ ನಿರೂಪಿಸಿ ಗಣೇಶ್ ವಂದಿಸಿದರು.

Leave a Reply

Your email address will not be published. Required fields are marked *