ಮಂಗಳೂರು ವಿ.ವಿ. ವೇಟ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್; ಸತತ 23ನೇ ಬಾರಿ ಆಳ್ವಾಸ್ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಚಾಂಪಿಯನ್ಸ್

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಧವಳಾ ಕಾಲೇಜಿನ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ವೇಟ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಪುರುಷ ಮತ್ತು ಮಹಿಳಾ ವಿಭಾಗಗಳೆರಡರಲ್ಲೂ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಆಳ್ವಾಸ್ ಕಾಲೇಜು ಸತತ 23ನೇ ಬಾರಿ ಸಮಗ್ರ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ವಿಶ್ವವಿದ್ಯಾನಿಲಯ ಮಟ್ಟದ ವೇಟ್‍ಲಿಫ್ಟಿಂಗ್‍ನಲ್ಲಿ ತನ್ನ ಕ್ರೀಡಾ ಸಾಧನೆಯನ್ನು ಮುಂದುವರಿಸಿದೆ.
ಮಹಿಳಾ ವಿಭಾಗದಲ್ಲಿ ಶ್ರಾವ್ಯ, ಸೀಮಾ, ಕಾಂಚನಾ, ಮಾನಸ ಹಾಗೂ ವಿತಶ್ರಿ ಚಿನ್ನದ ಪದಕಗಳನ್ನು ಗೆದ್ದರೆ, ನೀಲಾಂಬಿಕೆ ಮತ್ತು ಪಲ್ಲವಿ ಬೆಳ್ಳಿ ಪದಕಗಳನ್ನು ಪಡೆದರು.

ಪುರುಷರ ವಿಭಾಗದಲ್ಲಿ ವೀರೇಶ್, ಗುಲ್ಸನ್ ಕುಮಾರ್, ಗಣೇಶ್, ಶುಭಮ್ ಹಾಗೂ ಗಣೇಶ್ ಗೌಡ ಚಿನ್ನದ ಪದಕಗಳನ್ನು ಗೆದ್ದರು. ಅಶ್ವಿನ್, ಸಂಗಮ್ ಮತ್ತು ತೇಜಸ್ ಬೆಳ್ಳಿ ಪದಕಗಳನ್ನು ಪಡೆದು ತಂಡದ ಸಾಧನೆಗೆ ಕೊಡುಗೆ ನೀಡಿದರು.
ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *