ಶಕ್ತಿ ವಸತಿ ಶಾಲೆಯಲ್ಲಿ ಜಾಗೃತಿ ಅರಿವು ಸಪ್ತಾಹ –2026

ಮಂಗಳೂರು: ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಯಿಯಲ್ ಶಾಲೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸಹಯೋಗದೊಂದಿಗೆ, ಶಕ್ತಿ ವಸತಿ ಶಾಲೆಯಲ್ಲಿ 2026 ರ ಅಕ್ಟೋಬರ್ 28 ರಿಂದ ನವೆಂಬರ್ 4ರ ವರೆಗೆ ಜಾಗೃತಿ ಅರಿವು ಸಪ್ತಾಹವನ್ನು (Vigilance Awareness Week )ಆಚರಿಸಲಾಯಿತು.

ಈ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ವರ್ಷದ ಸ್ಪರ್ಧೆಗಳ ಮುಖ್ಯ ವಿಷಯ “ಸತ್ಯ, ನಿಷ್ಟೆ, ಸಮೃದ್ಧಿ (Probity for Prosperity) ಎಂಬುದಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು HPCL ನ ಮುಖ್ಯ ಪ್ರಾದೇಶಿಕ ಅಧಿಕಾರಿ ಅರುಣ್ ಬನ್ಸಾಲ್‍ ಅವರು ವಹಿಸಿದ್ದು ಅವರು ತಮ್ಮ ತಂಡದೊಂದಿಗೆ ಭಾಗವಹಿಸಿದ್ದರು. ಅವರೊಂದಿಗೆ HPCL ನ ವ್ಯವಸ್ಥಾಪಕರಾದ ಇಶಿಕಾ ಹಾಗೂ ಸಹಾಯಕ ವ್ಯವಸ್ಥಾಪಕರಾದ ಅಭಿಷೆೇಕ್‍ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ವಿದ್ಯಾರ್ಥಿಗಳಿಗಾಗಿ ಈ ಕೆಳಗಿನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು:
1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ : ಚಿತ್ರಕಲೆ ಮತ್ತು ಬಣ್ಣ ತುಂಬುವ ಸ್ಪರ್ಧೆ.
6ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ : ಭಾಷಣ ಸ್ಪರ್ಧೆ.
9 ಮತ್ತು 10ನೆ ತರಗತಿಯ ಮಕ್ಕಳಿಗೆ : ಪ್ರಬಂಧ ರಚನೆ ಸ್ಪರ್ಧೆ ಆಯೋಜಿಸಲಾಗಿದ್ದು, ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ಅರುಣ್ ಬನ್ಸಾಲ್‍ ಅವರು “ಮಕ್ಕಳಲ್ಲಿ ಪ್ರಾಮಾಣಿಕತೆ, ನಿಷ್ಟೆ, ನ್ಯಾಯಸಮ್ಮತತೆ, ನ್ಯಾಯಪರತೆ ಮತ್ತು ಸಮಗ್ರತೆಯಂತಹ ಉನ್ನತ ಮೌಲ್ಯಗಳನ್ನು ಬೆಳೆಸುವ ಉದ್ದೇಶವನ್ನು ಈ ಕಾರ್ಯಕ್ರಮವು ಒಳಗೊಂಡಿದ್ದು, ಇಂತಹ ಮೌಲ್ಯಗಳು ಭ್ರಷ್ಟಾಚಾರ ಮುಕ್ತ ಹಾಗೂ ಬಲಿಷ್ಠ ಭಾರತವನ್ನು ನಿರ್ಮಿಸಲು ಸಹಕಾರಿಯಾಗುತ್ತವೆ.
ಪ್ರಾಮಾಣಿಕತೆ ಮತ್ತು ನೈತಿಕ ಮೌಲ್ಯಗಳನ್ನು ಪಾಲಿಸುವ ಬದ್ಧತೆಯು ನಮ್ಮ ತರಗತಿ ಕೊಠಡಿಗಳಿಂದಲೇ ಆರಂಭವಾಗಬೇಕು. ನಮ್ಮ ಕುಟುಂಬಗಳಲ್ಲಿ, ದೈನಂದಿನ ಚಟುವಟಿಕೆಗಳಲ್ಲಿ ಹಾಗೂ ಜೀವನದ ಪ್ರತಿಯೊಂದು ಕಾರ್ಯದಲ್ಲಿಯೂ ಈ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅರುಣ್ ಬನ್ಸಲ್‍ ಅವರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಶಕ್ತಿ ವಸತಿ ಶಾಲಾ ಪ್ರಾಂಶುಪಾಲರಾದ ಸುರೇಖಾ ಭಟ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ದ್ವಿತಿ ರವರು ಸತ್ಯ ನಿಷ್ಟೆ ಸಮೃದ್ಧಿ ಎಂಬ ವಿಷಯದಕುರಿತು ಭಾಷಣ ಮಾಡಿದರು.
ಶಿಕ್ಷಕಿ ಚೇತನ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *