ಸಂತ ಅಲೋಶಿಯಸ್ ಉರ್ವಾ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಆಚರಣೆ – 2026

ಮಂಗಳೂರು: ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಭವ್ಯವಾಗಿ ಜರಗಿತು. ಭಾರತದ ಮೊದಲ ಪ್ರಧಾನಿ ಮಂತ್ರಿ ಜವಾಹರಲಾಲ್ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸಲಾಗುತ್ತದೆ. ಈ ಕಾರ್ಯಕ್ರಮವನ್ನು ಶಾಲಾ ಸಂಚಾಲಕರಾದ ವಂ. ಗುರುಗಳಾದ ಫಾದರ್ ಬೆಂಜಮಿನ್ ಪಿಂಟೋ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶೈಲಶ್ರೀ ಗಂಗೂಲಿ,
ಶಾಲಾ ಮುಖ್ಯ ಶಿಕ್ಷಕರಾದ ಅಲೋಶಿಯಸ್ ಡಿಸೋಜ ರವರು ದೀಪ ಬೆಳಗಿಸುವುದರೊಂದಿಗೆ ಆರಂಭವಾಯಿತು.

ಶಾಲಾ ಸಂಚಾಲಕರಾದ ವಂ. ಗುರುಗಳಾದ ಫಾದರ್ ಬೆಂಜಮಿನ್ ಪಿಂಟೋ ರವರು ಮಕ್ಕಳಿಗಾಗಿ ಶುಭಾಶಯ ಕೋರಿ ಶಿಕ್ಷಣದ ಮಹತ್ವ ಮತ್ತು ಅವರ ಸಮಗ್ರ ಅಭಿವೃದ್ಧಿಗೆ ಶಾಲೆಯ ಜವಾಬ್ದಾರಿಯನ್ನು ಮನದಟ್ಟು ಮಾಡಿದರು. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ
ಮುಕ್ತಾಯವಾದ. ಈ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿ ಲವಿನಾ ಪಿಂಟೋ, ಸಹ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಹರಿಣಾಕ್ಷಿ ಆರ್ ಮತ್ತು ಲವಿನ ಕೊರೆಯ ನಿರೂಪಿಸಿ, ಲವಿನಾ ಲೋಬೊ ಸ್ವಾಗತಿಸಿ ಶಾಲಾ ನಾಯಕರಾದ ಹರ್ಷವರ್ಧನ್ ರಾವ್ ಮತ್ತು ಜೇನ್ ಜೆರುಶ ಪಿಂಟೋ ವಂದಿಸಿದರು.

Leave a Reply

Your email address will not be published. Required fields are marked *