ನ. 20 ರಂದು ತುಳು ಭವನದಲ್ಲಿ ‘ಮಹಾತ್ಮೆ ಕುದ್ಮುಲ್’ ತುಳು ನಾಟಕ ಪ್ರದರ್ಶನ

ಮಂಗಳೂರು: ಸಾಮಾಜಿಕ ಸುಧಾರಣೆಯ  ಹರಿಕಾರ ಕುದ್ಮುಲ್ ರಂಗರಾಯರ ಬದುಕು ಹಾಗೂ ಸೇವೆಯನ್ನು ಬಿಂಬಿಸುವ ‘ಮಹಾತ್ಮೆ ಕುದ್ಮುಲ್ ‘ತುಳು ನಾಟಕ ಪ್ರದರ್ಶನ ನಗರದ ತುಳು ಭವನದಲ್ಲಿ ನ. 20ರಂದು ಸಂಜೆ 6.30 ಕ್ಕೆ ನಡೆಯಲಿದೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿರ್ಮಾಣ ಮಾಡಿರುವ ಈ ನಾಟಕವನ್ನು ಜಗನ್ ಪವಾರ್ ಬೇಕಲ್ ರಚಿಸಿದ್ದು, ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ ಜರ್ನಿ ಥೇಟರ್ ಗ್ರೂಪ್ ತಂಡದವರು ಅಭಿನಯಿಸಲಿದ್ದಾರೆ ಎಂದು ತುಳು ಅಕಾಡೆಮಿ ಪ್ರಕಟಣೆ ತಿಳಿಸಿದೆ.

ನಾಟಕಕ್ಕೆ ಉಚಿತ ಪ್ರವೇಶ ಇರುವುದು ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *