ಸಿದ್ಧಕಟ್ಟೆ: ಗುಣಶ್ರೀ ವಿದ್ಯಾ ಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಸಿದ್ಧಕಟ್ಟೆ ಪಲ್ಗುಣಿಯ ಮಾಜಿ ಅಧ್ಯಕ್ಷರಾದ ಹಾಗೂ ಪ್ರಸ್ತುತ ರೋಟರಿ ಕ್ಲಬ್ ನ ಐ ಪಿ ಪಿ ಆಗಿರುವ ದುರ್ಗಾ ದಾಸ್ ಶೆಟ್ಟಿ ಮತ್ತು ರೋಟರಿ ಕ್ಲಬ್ ಸಿದ್ಧಕಟ್ಟೆ ಪಲ್ಗುಣಿ ಇದರ ಕಾರ್ಯದರ್ಶಿಯಾಗಿರುವ ಪ್ರಮೀಳಾ ಶೆಟ್ಟಿ ಇಂದಿನ ಅತಿಥಿಯಾಗಿ ಆಗಮಿಸಿ ಧ್ವಜಾರೋಹಣ ಕಾರ್ಯಕ್ರಮ ನಡೆಸಿಕೊಟ್ಟರು ಹಾಗೂ ಅವರೊಂದಿಗೆ ಶಾಲಾ ಆಡಳಿತ ಮಂಡಳಿಯವರು ಜೊತೆಗಿದ್ದರು. ಈ ಕಾರ್ಯಕ್ರಮದಂದು ವಿದ್ಯಾರ್ಥಿಗಳು ದೇಶಭಕ್ತಿ ಸಾರುವ ಗೀತೆಯನ್ನು ಹಾಡಿದರು ಹಾಗೂ ಸ್ವಾತಂತ್ರ್ಯ ದಿನದ ಮಹತ್ವದ ಬಗ್ಗೆ ಭಾಷಣ ಮಾಡಿದರು. ಹಾಗೆಯೇ ಅಥಿತಿ ಗಣ್ಯರು ಕ್ರೀಡಾ ಕೂಟದಲ್ಲಿ ಜಿಲ್ಲಾ ಮಟ್ಟಕೆ ಆಯ್ಕೆಯಾದ ಮಕ್ಕಳನ್ನು ಈ ಸಂದರ್ಭದಲ್ಲಿ ಅಭಿನಂದಿಸಿ ಮುಂದಿನ ಕ್ರೀಡಕೂಟಕ್ಕೆ ಶುಭ ಹಾರೈಸಿದರು. ಅಂತೆಯೇ ಶಾಲೆಯ ಶಿಕ್ಷಕರು, ಪೋಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
