ಕಾರ್ಕಳ: ಡಾ ಮೋಹನ್ ಆಳ್ವರಿಗೆ “ಬೆದರದ ಕಾಮಧೇನು” ಬಿರುದು ಪ್ರಧಾನ

ಕಾರ್ಕಳ: ಮೂಡಬಿದ್ರಿ ಶಿಕ್ಷಣ ಹರಿಕಾರ, ಸಾಂಸ್ಕೃತಿಕ ರಾಯಭಾರಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ ಎಂ ಮೋಹನ್ ಆಳ್ವರಿಗೆ ಅವರ 75 ವರ್ಷದ ಬದುಕಿನ ಸುಸಂದರ್ಭದಲ್ಲಿ ರಾಜ್ಯ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲಕರ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಅವರ ನೇತೃತ್ವದಲ್ಲಿ ಕಾರ್ಕಳ ತಾಲೂಕಿನ ಬಜಗೋಳಿ ಅಂಬಿದ ಗುಂಡಿ ಎಸ್ ಪಿ ಗಾರ್ಡನ್ ನಲ್ಲಿ ನಡೆದ ಅಭೂತಪೂರ್ವ ಕಾರ್ಯಕ್ರಮದಲ್ಲಿ “ಬೆದರದ ಕಾಮಧೇನು” ಎಂಬ ಬಿರುದನ್ನು ಅಳದಂಗಡಿ ಅರಮನೆಯ ತಿಮ್ಮಣ್ಣ ಅರಸು ಡಾ. ಪದ್ಮಪ್ರಸಾದ್ ಅಜಿಲ ಅವರು ಪ್ರದಾನ ಮಾಡಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಿಗೆ ಶಿಕ್ಷಣಕ್ಕಿಂತ ಸಂಸ್ಕಾರ, ಸಂಸ್ಕೃತಿ ಅತೀ ಮುಖ್ಯ ಇಂತಹ ವಿದ್ಯಾರ್ಥಿಗಳಿಗೆ ಸಂಸ್ಕೃತಿ ಪಾಠದೊಂದಿಗೆ ಸಂಸ್ಕಾರ ನೀಡುವಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಹಾಗೂ ಆಳ್ವರ ವ್ಯಕ್ತಿತ್ವಕ್ಕೆ ಜ್ವಲಂತ ಸಾಕ್ಷಿ ಎಂದರು.

ಎನ್ ಆರ್ ದಾಮೋದರ ಶರ್ಮಾ ಮಾತನಾಡಿ, ಗೋಧೂಳಿ ಮುಹೂರ್ತ ನಡೆದ ಕಾರ್ಯಕ್ರಮ ಪಾವನ ಪೂಜ್ಯ ಕಾರ್ಯಕ್ರಮ. ತನ್ನ ಪ್ರಾಣವನ್ನು ನೀಡಿ ತನ್ನನು ಸಾಕಿದವನನ್ನು ಬದುಕಿಸುವುದು ಗೋಮಾತೆ ಅನ್ನೋದು ಸತ್ಯ. ಮೋಹನ್ ಆಳ್ವ ಒಬ್ಬ ಸಾಮಾನ್ಯ ಮನುಷ್ಯ ಅಲ್ಲ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯವಾದದ್ದು ಅವರು ಮೋಹನ್ ಆಳ್ವ ಮಾತ್ರವಲ್ಲ ಮಹಾನ್ಆಳ್ವರಾಗಿದ್ದಾರೆ ಅಸಿವಿನಲ್ಲಿ ಸಂತಸ ಕಂಡವರು ಅವರ ಶಿಕ್ಷಣದ ಹಸಿವು, ಸಂಸ್ಕಾರದ ಹಸಿವನ್ನು ಶಿಕ್ಷಣದ ಮೂಲಕ ನೀಗಿಸಿದವರು ಮೋಹನ್ ಆಳ್ವರು. ಅಂದರು, ಆಶಕ್ತರು, ಅಂಗವಿಕಲರಿಗೆ ಶಿಕ್ಷಣದೊಂದಿಗೆ ಕ್ರೀಡೆ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿದವರು ಮೋಹನ್ ಆಳ್ವರಾಗಿದ್ದಾರೆ ಎಂದರು.

ಬೆದರದ ಕಾಮಧೇನು ಬಿರುದು ಸ್ವೀಕರಿಸಿ ಮಾತನಾಡಿದ ಡಾ ಎಂ ಮೋಹನ್ ಆಳ್ವ, ವ್ಯಕ್ತಿಗೆ ಗೌರವಿಸುವಾಗ ಆಗುವ ಮನಸ್ಸಿಗೆ ಕಷ್ಟ ಆದರೆ ಗೌರವಿಸುವ ವ್ಯಕ್ತಿಗಳ ಸಂತೋಷಕ್ಕಾಗಿ ಸ್ವೀಕರಿಸಬೇಕಾಗುತ್ತದೆ. ದಾನದ ಶ್ರೇಷ್ಠತೆ ದಾನವನ್ನು ಪಡೆದುಕೊಳ್ಳುವ ವ್ಯಕ್ತಿಯ ಅಗತ್ಯತೆ ಹಾಗೂ ದಾನ ನೀಡುವ ವ್ಯಕ್ತಿಯ ಶ್ರೇಷ್ಠತೆಯನ್ನು ತೊರ್ಪಡಿಸುತ್ತದೆ. ಕಾಮಧೇನು ಎಂದರೆ ಸಂಪತ್ತು ಸಮ್ರದ್ದಿಯ ಸಂಕೇತ ಕೇಳಿದ್ದನ್ನು ನೀಡುವ ಗೋಮಾತೆ. ಐಶ್ವರ್ಯ ಮತ್ತು ಹೆಸರನ್ನು ಆಶಿಸಿಕೊಂಡು ಹೋಗಬಾರದು ಅಹಂಕಾರ ಪಡಬಾರದು. ನಮ್ಮ ಕೆಲಸವನ್ನು ಜನ ನೋಡಿ ನಮ್ಮನ್ನು ಗೌರವಿಸುತ್ತಾರೆ ಗೌರವಕ್ಕೆ ಅಹಂಕಾರದಿಂದ ಬೀಗಬಾರದು ಸದಾ ನಮ್ಮ ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು

ಮೋಹನ್ ಆಳ್ವರನ್ನು ಗೌರವಿಸಿ ಮಾತನಾಡಿದ ತಿಮ್ಮಣ್ಣ ಅರಸು ಡಾ. ಪದ್ಮಪ್ರಸಾದ್ ಅಜಿಲ ಅವರು ಒಬ್ಬ ವ್ಯಕ್ತಿ ಕೇವಲ ಒಳ್ಳೇಯ ಕಾರ್ಯವನ್ನು ಮಾಡುವವನು ಮಾತ್ರವಲ್ಲ ಸದಾ ಜನ ಮನದಲ್ಲಿ ನೆನಪಿಡುವಂತಹ ವ್ಯಕ್ತಿಯಾಗಬೇಕು ಅವನ ವ್ಯಕ್ತಿತ್ವ ಎಲ್ಲರಿಗೂ ದಾರಿದೀಪವಾಗಬೇಕು ಆಳ್ವರ ವ್ಯಕ್ತಿತ್ವವೇ ಅವರ ಈ ಸಾಧನೆಯ ಹೆಗ್ಗುರುತು ಎಂದರು.

ಶಾಸಕ ವಿ. ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ರವೀಂದ್ರ ಶೆಟ್ಟಿ ಯವರ ಗೋದಾನ ಹಾಗೂ ಆಳ್ವರಿಗೆ ಬಿರುದು ನೀಡುವ ಕಾರ್ಯಕ್ರಮ ಬಹಳ ಅಭೂತಪೂರ್ವ ಅರ್ಥಪೂರ್ಣ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ರೂವಾರಿ ರಾಜ್ಯ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲಕರ ಸಂಘದ ಅಧ್ಯಕ್ಷ ಡಾ ರವೀಂದ್ರ ಶೆಟ್ಟಿ ಬಜಗೋಳಿ ಅವರು 6ನೇ ವರ್ಷದ ಗೋದಾನ ಕಾರ್ಯಕ್ರಮ ಇದಾಗಿದ್ದು ಸುಮಾರು ಬಡ ಹಾಗೂ ಗೋವುಗಳನ್ನ ಸಾಕಲು ವ್ಯವಸ್ಥೆಗಳಿರುವ 5 ಬಡ ಕುಟುಂಬಗಳಿಗೆ ಉತ್ತಮ ತಳಿಯ ಗೋವುಗಳನ್ನು ದಾನ ಮಾಡಲಾಗಿದೆ.
ಗೋಕಳ್ಳರಿಂದಾಗಿ ಗೋವುಗಳನ್ನು ಕಳಕೊಂಡವರಿಗಾಗಿ ದೀಪಾವಳಿ ಸಂದರ್ಭ ಗೋದಾನ ಕಾರ್ಯಕ್ರಮದ ಮೂಲಕ ಈ ಪುಣ್ಯ ಕಾರ್ಯ ಆರಂಭಿಸಲಾಗಿದ್ದು‌ ಇದೀಗ 6ನೇ‌ ವರ್ಷ ಗೋದಾನ ನಡೆಸಲಾಗುತ್ತಿದೆ. ಆದರೆ ಗೋವನ್ನು ಸಾಕಿ ಜೀವನ ನಿರ್ವಹಣೆ ಮಾಡಲು ಸಿದ್ಧರಿರುವ ಕುಟುಂಬಗಳಿಗೆ ಮಾತ್ರ ಗೋದಾನ ಮಾಡಲಾಗುತ್ತದೆ ಎಂದರು.

ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ರಾಜ್ಯಕ್ಕೆ ಪ್ರಥಮ ರಾಂಕ್ ಗಳಿಸಿದ ದಿಶಾ ಪೂಜಾರಿ ಮೂಡಬಿದ್ರಿ, ಹಿಮಾಲಯ ಪರ್ವತವನ್ನು ಏರಿದ ಪತ್ರಕರ್ತೆ ಬಜಗೋಳಿ ಗುರುನಗರದ ಸುಮಲತಾ, ರಾಜ್ಯಕ್ಕೆ ಪ್ರಥಮ ರಾಂಕ್ ಗಳಿಸಿದ ನಲ್ಲೂರು ಶ್ರೀನಿಧಿ ಶೆಟ್ಟಿ ಎಂಬ ಧೀರ ಮಾತೆಯರಿಗೆ ” “ಅಂಬಾಶ್ರೀ” ಬಿರುದು ಪ್ರಧಾನ ಮಾಡಲಾಯಿತು.

ವೇದಿಕೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠನದ ಡಾ ಗಣನಾಥ್ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ಧನಲಕ್ಷ್ಮೀ ಕ್ಯಾಶುಸ್ ಮಾಲಕ ಶ್ರೀಪತಿ ಭಟ್, ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಜನನಿದಾಸ್, ಮುಂಬೈ ಉದ್ಯಮಿ ಜಗನ್ನಾಥ್ ಶೆಟ್ಟಿ, ಎಲ್ ಐ ಸಿ ಶ್ಯಾಮ್ ಏನ್ ಶೆಟ್ಟಿ, ಉದ್ಯಮಿ ಕರಿಯಣ್ಣ ಶೆಟ್ಟಿ, ಹೈ ಕೋರ್ಟ್ ಹಿರಿಯ ನ್ಯಾಯವಾದಿ ಅಮೃತೇಶ್, ಕೃಷ್ಣ ಶೆಟ್ಟಿ ಬರ್ನಾನಂತೆಲ್, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಸುಂದರ ಬಿ ಹೊಸ್ಮಾರ್, ರಾಜೇಶ್ವರಿ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಡಿ ದೇವಿಪ್ರಸಾದ್ ಶೆಟ್ಟಿ, ಹಿಂದೂ ಮುಖಂಡ ಗುರುಪ್ರಸಾದ್ ನಾರಾವಿ, ಬಜಗೋಳಿ ಸಾರ್ವಜನಿಕ ಶಾರದೋತ್ಸವ ಸಮಿತಿ ಅಧ್ಯಕ್ಷ ಯತೀಶ್ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ಮೂಡಬಿದ್ರಿ ವಿವೇಕ್ ಆಳ್ವ, ಏರ್ನಡ್ಕ ವಿಶ್ವನಾಥ್ ಶೆಟ್ಟಿ, ಶರತ್ ಶೆಟ್ಟಿ ಪಂಜಳ, ಭಾಸ್ಕರ್ ಪೂಜಾರಿ ನಲ್ಲೂರು, ರಾಜಶೇಖರ್ ಬೆಂಗಳೂರು, ವಾಸುದೇವ ಹೆಬ್ಬಾರ್ ಮಂಜರಫಲ್ಕೆ, ಉಪಸ್ಥಿತರಿದ್ದರು.
ಗೋಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ ನಂತರ ಆಳ್ವಾಸ್ ಸಾಂಸ್ಕೃತಿಕ ತಂಡದ ನರಶಾರ್ದೂಲ ಯಕ್ಷಗಾನ ಪ್ರದರ್ಶನ ನಡೆಯಿತು.

ದಾರಿಣಿ ಉಪಾಧ್ಯ ಪ್ರಾರ್ಥಿಸಿದರು. ಡಾ ಸ್ನೇಹಾ ಆರ್ ಶೆಟ್ಟಿ ಪ್ರಸ್ತಾವನೆಗೈದರು. ಶ್ರೇಯ ಆರ್ ಶೆಟ್ಟಿ ಸ್ವಾಗತಿಸಿ, ಶಿಕ್ಷಕ ನಾಗೇಶ್ ನಲ್ಲೂರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *