ಮೂಡುಬಿದಿರೆ: ದವಳತ್ರಯ ಜೈನ ಕಾಶಿ ಟ್ರಸ್ಟ್ (ರಿ) ಶ್ರೀ ಜೈನಮಠ ಮೂಡುಬಿದಿರೆ ಇದರ ಸಹಯೋಗದಿಂದ ನಡೆಯಲ್ಪಡುತ್ತಿರುವ ಸ್ವಸ್ತಿಶ್ರೀ ಇಲ್ಲಿ ನ. 21 ರಂದು ಬೆಳಿಗ್ಗೆ 10 ಗಂಟೆಗೆ ವಾರ್ಷಿಕ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.

ಕ್ರೀಡಾಕೂಟದ ಅಧ್ಯಕ್ಷತೆ ಹಾಗೂ ಪಾವನ ಸಾನಿಧ್ಯವನ್ನು ಕಾಲೇಜಿನ ಸ್ಥಾಪಕ ಅಧ್ಯಕ್ಷರಾದ ಜಗದ್ಗುರು ಡಾ. ಸ್ವಸ್ತಿ ಶ್ರೀ ಚಾರುಕೀರ‍್ತಿ ಭಟ್ಟಾರಕ ಪಂಡಿತಾಚಾರ‍್ಯ ಪಟ್ಟಾಚಾರ‍್ಯವರ‍್ಯ ಮಹಾಸ್ವಾಮೀಜಿ ಅಧ್ಯಕ್ಷ ತೆ ವಹಿಸಿದ್ದರು. ಆಶೀರ್ವಾದ ನೀಡಿ ಮಾತನಾಡುತ್ತಾ ಕ್ರೀಡೆ ಮನುಷ್ಯನಲ್ಲಿ ಮಾನಸಿಕ ಹಾಗೂ ಶಾರೀರಿಕ ದೃಢತೆಯನ್ನು ಕಾಪಾಡಿಕೊಳ್ಳುವಲ್ಲಿ ಸಹಾಯಕವಾಗಿದೆ ಎಂದರು. ಎಲ್ಲಾ ವಿಧ್ಯಾರ್ಥಿಗಳು ವಿದ್ಯೆಯ ಜೊತೆಗೆವಿವಿಧ ಕ್ರೀಡೆಯಲ್ಲಿ ಕೂಡ ಆಸಕ್ತಿಯನ್ನು ಬೆಳೆಸಿಕೊಂಡು ಭಾಗವಹಿಸಬೇಕು ಎಂದು ತಿಳಿಸಿದರು. ಕ್ರೀಡಾಕೂಟವನ್ನು ಪ್ರಭಾತ್ ಸಿಕ್ಸ್ಮಾ ಮಾಲಕರಾದ ಪೂರ‍್ಣಚಂದ್ರ ಜೈನ್ ಇವರು ಬೆಳಿಗ್ಗೆ ದೀಪ ಬೆಳಗಿಸಿ ಸಾವಿರಕಂಬ ಬಸದಿ ಬಳಿ ಉದ್ಘಾಟಿಸಿದರು. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಓದುವ ವಿಧ್ಯೆ ಜೊತೆಗೆ ಕ್ರೀಡೆಯಲ್ಲೂ ಕೂಡ ಆಸಕ್ತಿಯನ್ನು ಬೆಳೆಸಿಕೊಂಡು ಉನ್ನತ ಮಟ್ಟಕ್ಕೆ ಏರಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಶಿಕ್ಷಕರಕ್ಷಕ ಸಂಘದ ಸಂಚಾಲಕರಾದ ಶ್ವೇತಾ ಜೈನ್ ಇವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರು ಉಪನ್ಯಾಸಕರು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಸೌಮ್ಯಶ್ರೀ ಸ್ವಾಗತಿಸಿದರು. ಹಿತೇಶ್ ರಾವ್ ಇವರು ಕಾರ್ಯಕ್ರಮ ನಿರೂಪಿಸಿದರು. ಸುಷ್ಮಾ ಇವರು ಧನ್ಯವಾದವಿತ್ತರು. ಬಳಿಕ ವಿವಿಧ ಕ್ರೀಡಾ ಚಟುವಟಿಕೆ ನಡೆಯಿತು.
