ಎಲ್ಲಾ ಸಮುದಾಯದ ಜನರನ್ನು ಒಗ್ಗೂಡಿಸುವ ಸೌಹಾರ್ದ ಸಂಗಮ ಶ್ಲಾಘನೀಯ – ಐಕಳ ಹರೀಶ್ ಶೆಟ್ಟಿ

ಮಂಗಳೂರು; ಸಮಾಜದ ಎಲ್ಲಾ ಸಮುದಾಯದ ಜನರನ್ನು  ಜಾತಿ,ಮತ, ಧರ್ಮ ಭೇದವಿಲ್ಲದೆ ಮಾಧ್ಯಮದ ಮೂಲಕ ಒಟ್ಟು ಸೇರಿಸಿ ಕಳೆದ 14 ವರ್ಷಗಳಿಂದ  ಎಂ.ಪಿ,ಎಂ .ಎಲ್ .ಎ ನ್ಯೂಸ್  ಪತ್ರಿಕೆ ಮತ್ತು ವೆಬ್ ಜಾಲದ ಮೂಲಕ  ಸೌಹಾರ್ದ ಸಂಗಮವನ್ನು ಅಶೋಕ್ ಶೆಟ್ಟಿ ಬಿ.ಎನ್ ನಡೆಸಿಕೊಂಡು ಬರುತ್ತಿರು ವುದು ಶ್ಲಾಘನೀಯ ಎಂದರು.

ಅವರು ಮಂಗಳವಾರ ನಗರದ ಕುದ್ಮುಲ್ ರಂಗರಾವ್  ಪುರಭವನದಲ್ಲಿ ಎಂ.ಪಿ,ಎಂಎಲ್ ಎ ಪತ್ರಿಕೆ ಮತ್ತು ನ್ಯೂಸ್ ವೆಬ್ ಮೀಡಿಯಾ ವತಿಯಿಂದ ಹಮ್ಮಿಕೊಂಡ 14 ವರ್ಷದ ಸೌಹಾರ್ದ ಸಂಗಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ  ವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡುತ್ತಾ, ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ  ನಿರಂತರವಾಗಿ ಭಾಗವಹಿಸುತ್ತಿರುವುದು ಸಂತಸ ತಂದಿದೆ. ಸಮಾಜದಲ್ಲಿ ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಇರಬೇಕೆಂಬ ಮಾತಿನಂತೆ  ನಡೆದು ಬಂದ ಸಮಾಜ ಸೇವಕರನ್ನು ಗುರುತಿಸಿರುವ  ಅಶೋಕ್ ಶೆಟ್ಟಿಯವರ ಪ್ರಯತ್ನ ಶ್ಲಾಘನೀಯ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆರ್ ಬಿ.ಐ.ಉತ್ತರ ವಲಯದ ಮಾಜಿ ನಿರ್ದೇಶಕ, ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿ ಮಾತನಾಡುತ್ತಾ, ಕಳೆದ ಹಲವು ವರ್ಷಗಳಲ್ಲಿ  ನಡೆಸಿಕೊಂಡು ಬಂದ ಸಮಾಜ ಸೇವಾ ಚಟುವಟಿಕೆಗಳನ್ನು ಗುರುತಿಸಿ ಗೌರವಿಸಿರುವುದು ಸಂತಸ ತಂದಿದೆ ಎಂದರು.
ಮಂಗಳೂರಿನ ಹಿರಿಯ ನ್ಯಾಯಾವಾದಿ ಕೆ.ದಯಾನಂದ ರೈ ಕಾರ್ಯಕ್ರಮ ವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ 30 ಕೋಟಿ ರೂಪಾಯಿಕ್ಕೂ ಅಧಿಕ ಹಣವನ್ನು ವಿತರಿಸಿ ಸೇವಾಕಾರ್ಯ ನಡೆಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರಿಗೆ ಸಮಾಜ ರತ್ನ ಪುರಸ್ಕಾರ ವನ್ಮು  ಅವರ ಧರ್ಮಪತ್ನಿ ಚಂದ್ರಿಕಾ ಹರೀಶ್ ಶೆಟ್ಟಿ ,ಕೆಎಂಸಿ ಆಸ್ಪತ್ರೆ ಮಂಗಳೂರಿನ ಆಡಿಷನಲ್ ಪ್ರೊಫೆಸರ್, ಸ್ತ್ರೀ ರೋಗ, ಹೆರಿಗೆ ತಜ್ಞೆ, ಲಾಪ್ರೋಸ್ಕೋಪಿಕ್ ಸರ್ಜನ್ ಡಾ. ನೀನಾ ಎ. ಮಹಾಲೆ ಅವರಿಗೆ ಅವರ ಪತಿ, ಕೆಎಂಸಿ ಮಂಗಳೂರಿನ ರೇಡಿಯೋಲಾಜಿ ಪ್ರೊಫೆಸರ್ ಅಜಿತ್ ಮಹಾಲೆ ಜೊತೆ ಬೆಸ್ಟ್ ಡಾಕ್ಟರ್ಸ್ ಅವಾರ್ಡ್ ನೀಡಿ ಸನ್ಮಾನಿಸಲಾಯಿತು.

ಕೆಎಸ್ಆರ್ ಟಿಸಿ ಮಂಗಳೂರು ವಿಭಾಗದ ಕೆಎಸ್ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ  ರಾಜೇಶ್ ಶೆಟ್ಟಿ ಅವರಿಗೆ ಬೆಸ್ಟ್ ಆಫೀಸರ್ಸ್ ಅವಾರ್ಡ್ ಸ್ವೀಕರಿಸಿ ಮಾತನಾಡುತ್ತಾ, ಸರಕಾರಿ ಅಧಿಕಾರಿಯಾಗಿ  ತಾನು ಮಾಡಿರುವ ಕೆಲಸಕ್ಕೆ ಉತ್ತಮ ಅಧಿಕಾರಿ ಎಂದು ಗುರುತಿಸಿರು ವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಸಮಾರಂಭದಲ್ಲಿ  ನ್ಯಾಯವಾದಿ ರಾಮಪ್ರಸಾದ್ ಆರ್, ವೈದ್ಯರತ್ನ ಗಂಗಾಧರ ಪಂಡಿತ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ,ದ.ಕ. ಜಿಲ್ಲಾ ಕಾರ್ಯನಿರತ  ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ. ಎನ್, ನಿಕಟ ಪೂರ್ವ ಅಧ್ಯಕ್ಷ  ಶ್ರೀನಿವಾಸ ನಾಯಕ್ ಇಂದಾಜೆ ಶುಭ ಹಾರೈಸಿದರು.

ಉಪಾಧ್ಯಕ್ಷರಾದ ಆರೀಫ್ ಪಡುಬಿದ್ರೆ, ವಿಲ್ಫ್ರೆಡ್ ಡಿ’ಸೋಜ, ಕೋಶಾಧಿ ಕಾರಿ ವಿಜಯ ಕೋಟ್ಯಾನ್, ನಮ್ಮ ಟಿವಿ ಆಡಳಿತ ನಿರ್ದೇಶಕ ಡಾ. ಶಿವಚರಣ್ ಶೆಟ್ಟಿ, ಸುರೇಶ್ ಶೆಟ್ಟಿ ಕುರ್ಲಾ, ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಆಕಾಶವಾಣಿ ಕಲಾವಿದೆ ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸೌಹಾರ್ದ ಸಂಗಮದ ಸಂಘಟಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಸ್ವಾಗತಿಸಿ, ಪ್ರಸ್ತಾವನೆ ಗೈದು ಧನ್ಯವಾದ ಸಮರ್ಪಿಸಿದರು. ಮಂಗಳೂರು ಪಾಂಡೇಶ್ವರ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ರಾಘವೇಂದ್ರ ಎಂ. ಬೈಂದೂರು ಮತ್ತು ಸಿಬ್ಬಂದಿವರ್ಗ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಸೌಹಾರ್ದ ಸಂಗಮ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಸುವರ್ಣ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಲನಚಿತ್ರ ಗಾಯಕ ರವೀಂದ್ರ ಪ್ರಭು ಅವರ ರಾಗ್ ರಂಗ್ ತಂಡದಿಂದ ಸೌಹಾರ್ದ ಸಂಗೀತ ರಸ ಸಂಜೆ ನಡೆಯಿತು. ದ.ಕ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನರೇಶ್ ಸಸಿಹಿತ್ಲು ರಚನೆ, ನಿರ್ದೇಶನದಲ್ಲಿ ತ್ರಿನೇತ್ರ ಕಲಾವಿದರಿಂದ ಬ್ರಹ್ಮ ರಕ್ಕಸೆ ತುಳುನಾಟಕದ ಪ್ರದರ್ಶನ ನಡೆಯಿತು.

Leave a Reply

Your email address will not be published. Required fields are marked *