ಮಾಳದಲ್ಲಿ ರಕ್ತದಾನ ಶಿಬಿರ

ಮಾಳ ಗ್ರಾಮ ಪಂಚಾಯತ್, ಆದಿತ್ಯ ಯುವಕ ಸಂಘ ಚೌಕಿ, ಗುರುಕುಲ ವಿದ್ಯಾವರ್ಧಕ ಸಂಘ ಮಾಳ, ಯುವಶಕ್ತಿ ಗೆಳೆಯರ ಬಳಗ ಮಾಳ, UFC ಫ್ರೆಂಡ್ಸ್ ಕ್ಲಬ್ ಹುಕ್ರಟ್ಟೆ , ರಕ್ತ ನಿಧಿ ಜಿಲ್ಲಾ ಆಸ್ಪತ್ರೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಮಾಳ ಗುರುಕುಲ ಶಾಲೆಯ ಅಮೃತ ಮಹೋತ್ಸವ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಿತು.

ಮಾಳ ಗ್ರಾಮ ಪಂಚಾಯತ್ ನ ಅಧ್ಯಕ್ಷ ಉಮೇಶ್ ಪೂಜಾರಿ ಅವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ರಕ್ತ ನಿಧಿ ಆಸ್ಪತ್ರೆ, ಉಡುಪಿ ಇದರ ಮುಖ್ಯಸ್ಥರಾದ ವೀಣಾ ಇವರು ರಕ್ತದಾನದ ಮಹತ್ವವನ್ನು ತಿಳಿಸುತ್ತಾ ಒಬ್ಬ ವ್ಯಕ್ತಿ ಕೊಡುವ ರಕ್ತದಿಂದ ಮೂರು ಜೀವಗಳನ್ನು ಉಳಿಸಬಹುದು. ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ ಇಂದಿನ ಕಾಲದಲ್ಲಿ ರಕ್ತದಾನ ಯಾವ ರೀತಿ ಅತ್ಯಂತ ಅಗತ್ಯವಾಗಿದೆ ಎಂಬುದನ್ನು ವಿವರಿಸಿದರು. ಗುರುಕುಲ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗಜಾನನ ಮರಾಠೆ, ಆದಿತ್ಯ ಯುವಕ ಮಂಡಲ ಚೌಕಿ ಇದರ ಅಧ್ಯಕ್ಷ ಪ್ರಸಾದ ಶೆಟ್ಟಿ, ಯುವಶಕ್ತಿ ಗೆಳೆಯರ ಬಳಗದ ಅಧ್ಯಕ್ಷ ನಂದಗೋಪನ್ ಗುರುಕುಲ ಶಾಲಾ ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷ ನಾಗಭೂಷಣ ಮರಾಠೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಘುಪತಿ ಕಾಮತ್ ಕಾರ್ಯಕ್ರಮವನ್ನು ನಿರ್ವಹಿಸಿದ್ದರು. ಅಕ್ಷತ್ ಮಾಳ ಅತಿಥಿಗಳನ್ನು ಸ್ವಾಗತಿಸಿದರು. ಕಿರಣ್ ಸುವರ್ಣ ವಂದನಾರ್ಪಣೆ ಗೈದರು. ರವೀಂದ್ರನಾಥ ಜೋಶಿ, ದಿನೇಶ್ BSNL ನೀಲೇಶ್ ತೆಂಡೂಲ್ಕರ್ ಸಹಕರಿಸಿದರು. ಸುಮಾರು 30 ದಾನಿಗಳು ರಕ್ತವನ್ನು ನೀಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Leave a Reply

Your email address will not be published. Required fields are marked *