ಪಾವೂರು ಸರಕಾರಿ ವಿದ್ಯಾಲಯದಲ್ಲಿ ಸಾರಥಿ ವಿದ್ಯಾರ್ಥಿ ಗ್ರಾಹಕ ಸಂಘ ಉದ್ಘಾಟನೆ

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಪಾವೂರು ಸರಕಾರಿ ಪ್ರೌಢಶಾಲೆಯಲ್ಲಿ ಫೆಬ್ರವರಿ 24ರಂದು ಸಾರಥಿ ವಿದ್ಯಾರ್ಥಿ ಗ್ರಾಹಕ ಸಂಘದ ಉದ್ಘಾಟನೆ ನೆರವೇರಿತು. ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ರಾಜ್ಯ ಸಂಪನ್ಮೂಲ ವ್ಯಕ್ತಿ, ದ.ಕ. ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ, ಪತ್ರಿಕಾ ವರದಿಗಾರ ರಾಯಿ ರಾಜಕುಮಾರ್ ಅವರು ಸಂಘವನ್ನು ದೀಪ ಬೆಳಗಿ ಉದ್ಘಾಟಿಸಿದರು

ಅವರು ತಮ್ಮ ಭಾಷಣದಲ್ಲಿ ಗ್ರಾಹಕನೇ ರಾಜನಾಗಲು ಇರಬೆಕಾದ ಅರ್ಹತೆಗಳು, ಗ್ರಾಹಕ ಸಂರಕ್ಷಣಾ ಕಾಯ್ದೆಯ ಹಕ್ಕುಗಳು, ಕರ್ತವ್ಯಗಳು, ಒಳಗೊಂಡಿರುವ ಹಲವಾರು ವಿಷಯಗಳ ಬಗ್ಗೆ ಸವಿಸ್ತಾರವಾಗಿ ಉದಾಹರಣೆಗಳೊಂದಿಗೆ ವಿವರಿಸಿದರು. ಇರುವ ಪ್ಲಾಸ್ಟಿಕ್ ಅನ್ನು ಪುನರ್ ಬಳಕೆಗೆ ಉಪಯೋಗಿಸುವುದರೊಂದಿಗೆ ಸಾಧ್ಯವಾದಷ್ಟು ಪ್ಲಾಸ್ಟಿಕ್ ನ ಬಳಕೆಯನ್ನು ಕಡಿಮೆ ಮಾಡುವಂತೆ ವಿನಂತಿಸಿದರು. ಲೋಪದೋಷಗಳನ್ನು, ಶೋಷಣೆಯನ್ನು ನಿವಾರಿಸಿಕೊಳ್ಳುವ ಕ್ರಮಗಳನ್ನು ತಿಳಿಸಿಕೊಟ್ಟು, ಅಗತ್ಯವಿದ್ದಲ್ಲಿ ಮಾಹಿತಿ ಹಕ್ಕು ಕಾಯ್ದೆ ಹೇಗೆ ಉಪಯೋಗಿಸಬಹುದು ಎನ್ನುವುದರ ವಿವರಣೆಯನ್ನು ನೀಡಿದರು. ಶಾಲೆ ಹಾಗೂ ಇರುವ ಮನೆಯ ಪರಿಸರದ ಸ್ವಚ್ಛತೆಯನ್ನು ಕಾಪಾಡುವ ಅಗತ್ಯದ ಬಗೆಗೂ ತಿಳಿ ಹೇಳಿದರು.

ಇದೇ ಸಂದರ್ಭದಲ್ಲಿ ಗ್ರಾಹಕ ಸಂಬಂಧಿಸಿದ ವಿಷಯಗಳಲ್ಲಿ ನಡೆಸಿದ ಪ್ರಬಂಧ, ಚಿತ್ರಕಲೆ ಹಾಗೂ ಘೋಷಣೆಯ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಚಿತ್ರಕಲೆಯಲ್ಲಿ ಪ್ರಥಮ ಆಯಿಷತ್ ಅಫೀಫಾ, ದ್ವಿತೀಯ ಆಮ್ರಾ ಮರಿಯಮ್, ತೃತೀಯ ಸಾನುಬಿಯ. ಘೋಷಣೆ ವಾಕ್ಯ ಪ್ರಥಮ ಫಾತಿಮಾತುಲ್ ಅನೀನಾ, ದ್ವಿತೀಯ ಮೈಮುನತ್ ಮಿಸ್ರಿಯಾ, ತೃತೀಯ ಫಾತಿಮಾ ಫಾಹಿಮಾ. ಪ್ರಬಂಧ ಪ್ರಥಮ ಫಾತಿಮಾ ಫಾಹಿಮಾ, ದ್ವಿತೀಯ ಫಾತಿಮಾತುಲ್ ಅನೀನಾ, ತೃತೀಯ ಸುಮಯ್ಯ.

ಶಾಲಾ ಮುಖ್ಯ ಶಿಕ್ಷಕಿ ಶರ್ಮಿಳಾ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಶಿಕ್ಷಕಿಯರುಗಳಾದ ವಿದ್ಯಾವತಿ, ಕ್ಯಾರಲ್, ಲೋಲಾಕ್ಷಿ, ಸುಪ್ರಭಾ, ಯಶಸ್ವಿನಿ, ತೇಜಸ್ವಿನಿ ವೇದಿಕೆಯಲ್ಲಿ ಹಾಜರಿದ್ದರು. ಶಾಲಿನಿ ಒಲಿಂಪಿಯ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Leave a Reply

Your email address will not be published. Required fields are marked *