ಜೆಇಇ ಬಿ. ಆರ್ಕ್ ಮತ್ತು ಬಿ. ಪ್ಲಾನಿಂಗ್ ಫಲಿತಾಂಶ ಪ್ರಕಟ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ನಾಗಾದೇವ್ ಎಂ.ಜಿ. ಬಿ ಪ್ಲಾನಿಂಗ್ ನಲ್ಲಿ ಜನರಲ್ EWS ವಿಭಾಗದಲ್ಲಿ ದೇಶಕ್ಕೆ ಪ್ರಥಮ ಸ್ಥಾನ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್. ಟಿ. ಎ.) ವತಿಯಿಂದ ನಡೆಸಲಾದ ಜೆಇಇ ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್ ನ ಜನವರಿ ಆವೃತ್ತಿಯ ಫಲಿತಾಂಶ ಪ್ರಕಟಗೊಂಡಿದ್ದು ಕ್ರಿಯೇಟಿವ್ ಸಂಸ್ಥೆ ಅತ್ಯುತ್ತಮ ಫಲಿತಾಂಶವನ್ನು ಪಡೆದು ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ತನ್ನನ್ನು ಗುರುತಿಸಿಕೊಂಡಿದೆ. ನಾಗದೇವ್ ಎಂ.ಜಿ. ಬಿ.ಪ್ಲಾನಿಂಗ್ ನಲ್ಲಿ ಜನರಲ್ EWS ವಿಭಾಗದಲ್ಲಿ ದೇಶಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಬಿ. ಪ್ಲಾನಿಂಗ್ ಫಲಿತಾಂಶ ಪಟ್ಟಿ: ನಾಗದೇವ್ ಎಂ.ಜಿ.- 99.9762662, ಸುಕ್ಷಿತ್ ಗಿರೀಶ್ ಗೌಡ- 99.7769023, ಅಭಿರಾಮ್ ಭಟ್ ಜಿ.ಪಿ.- 98.3718612, ದಿಶಾಂತ್ ಎಂ. – 98.2152 181, ನಿಶಾಂತ್ ಹೊನ್ನಾವರ- 98.1107894, ಸಂವಿತ್ ಅಮಿತ್ ಗೋಕರ್ಣ- 98.1107894
ನಿನಾದ್ ರಾಜೇಶ್ ನಾಯ್ಕ್- 98.0490815 ಪರ್ಸೆಂಟೈಲನ್ನು ಪಡೆದುಕೊಂಡಿದ್ದಾರೆ.

ಮಾತ್ರವಲ್ಲದೆ 95ಪರ್ಸೆಂಟೈಲ್ ಗಿಂತ 16 ಮಂದಿ ವಿದ್ಯಾರ್ಥಿಗಳು, 90 ಪರ್ಸೆಂಟೈಲ್ ಗಿಂತ 24 ಮಂದಿ ವಿದ್ಯಾರ್ಥಿಗಳು ಫಲಿತಾಂಶವನ್ನು ಪಡೆದುಕೊಂಡಿದ್ದಾರೆ.
ಬಿ. ಆರ್ಕ್ ಫಲಿತಾಂಶ ಪಟ್ಟಿ: ನಾಗದೇವ್ ಎಂ.ಜಿ- 99.8371909, ಚೇತನ ಟಿ. ಪಿ.- 97. 6986711, ಶಮಿತ ನಾಯಕ್- 97. 4918595, ನಿಶಾಂತ್ ಹೊನ್ನಾವರ – 97. 4918595, ಅಮೃತ ಎಂ ನಾಯ್ಕ್ – 97.3686526, ಸುಕ್ಷಿತ್ ಗಿರೀಶ್ ಗೌಡ- 97.2542462 ಒಟ್ಟು 95% ಪರ್ಸೆಂಟೈಲ್ ಗಿಂತ 15 ಮಂದಿ ವಿದ್ಯಾರ್ಥಿಗಳು 90 ಪರ್ಸೆಂಟೈಲ್ ಗಿಂತ 34 ಮಂದಿ ವಿದ್ಯಾರ್ಥಿಗಳು ಫಲಿತಾಂಶವನ್ನು ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಕಾಲೇಜಿನ ಪರೀಕ್ಷಾ ಸಂಯೋಜಕರಾದ ಸುಮಂತ್ ದಾಮ್ಲೆ, ಉಪನ್ಯಾಸಕ ವರ್ಗದವರು, ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *